ಶಿವಸೇನೆ ರೀತಿಯಲ್ಲಿ ಟಿಎಂಸಿ 2 ಹೋಳು?- ಶಾಸಕಾಂಗ ಪಕ್ಷದಲ್ಲಿ ಭಾರಿ ಒಡಕುಕೋಲ್ಕತಾ: ಬಂಗಾಳದ ರಾಜಕೀಯ ದಿನಕ್ಕೊಂದು ಸ್ಫೋಟಕ ತಿರುವು ತೆಗೆದುಕೊಳ್ಳುತ್ತಿದ್ದು, ಮಮತಾ ಬ್ಯಾನರ್ಜಿ ಅವರ ಟಿಎಂಸಿ ವಿಭಜನೆಯ ಹಂತಕ್ಕೆ ಹೋಗಿದೆ. ಈ ಹಿಂದೆ ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆ ಅವರು ಹೇಗೆ ಶಿವಸೇನೆ ವಿಭಜಿಸಿದರೋ ಆ ರೀತಿ ಟಿಎಂಸಿ ವಿಭಜನೆ ಆಗಬಹುದು ಎಂಬ ಗುಲ್ಲು ಹರಿದಾಡುತ್ತಿದೆ.ಮಮತಾ ವಿರೋಧಿ ಬಣವಾದ ಉಚ್ಚಾಟಿತ ಟಿಎಂಸಿ ಶಾಸಕ ರಿತಬೃತ ಬಂಡೋಪಾಧ್ಯಾಯ ಅವರಿಗೆ 50 ಶಾಸಕರ ಬೆಂಬಲವಿದೆ ಎಂದು ಮತ್ತೊಬ್ಬ ಉಚ್ಚಾಟಿತ ನಾಯಕ ರಿಜು ದತ್ತಾ ಹೇಳಿಕೊಂಡಿದ್ದಾರೆ. ಇದು ಪಕ್ಷದ ವಿಭಜನೆಯ ಸೂಚಕ ಎಂದು ವಿಶ್ಲೇಷಿಸಲಾಗಿದೆ.
==ಏನಿದು ಕಟ್ ಮನಿ?ಮಮತಾ ಬ್ಯಾನರ್ಜಿ ಅಧಿಕಾರಾವಧಿಯಲ್ಲಿ ‘ಸರ್ಕಾರದ ಯೋಜನೆಗಳನ್ನು ಕೊಡಿಸುತ್ತೇನೆ’ ಎಂದು ಜನರಿಂದ ಟಿಎಂಸಿ ನಾಯಕರು ಹಾಗೂ ಕಾರ್ಯಕರ್ತರು ಸಾಕಷ್ಟು ಹಣ ವಸೂಲಿ ಮಾಡಿದ್ದರು ಎನ್ನಲಾಗಿತ್ತು, ಇದಕ್ಕೆ ‘ಕಟ್ ಮನಿ’ ಅಥವಾ ‘ಕಮಿಷನ್ ಹಣ’ ಅಥವಾ ‘ಸುಲಿಗೆ ಹಣ’ ಎನ್ನಲಾಗುತ್ತಿತ್ತು.
==ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಒಂದೆಡೆ ಅಕ್ರಮ ಬಾಂಗ್ಲಾ ವಲಸಿಗರು ದೇಶ ತೊರೆಯುತ್ತಿದ್ದರೆ, ಮತ್ತೊಂದೆಡೆ ಹಿಂದಿನ ಮಮತಾ ಸರ್ಕಾರದ ಅವಧಿಯಲ್ಲಿ ಜನರಿಂದ ಹಣ ಲೂಟಿ ಮಾಡಿದ್ದ ಟಿಎಂಸಿ ಪುಡಾರಿಗಳು, ತಾವು ಪಡೆದಿದ್ದ ಹಣವನ್ನು ಜನರಿಗೆ ಮರಳಿಸುತ್ತಿದ್ದಾರೆ. ಸರ್ಕಾರದ ಕಾನೂನು ಕ್ರಮ ಮತ್ತು ಜನರಿಂದ ದಾಳಿಯ ಭೀತಿಗೆ ಒಳಗಾದ ಟಿಎಂಸಿ ನಾಯಕರು ಹೀಗೆ ಲಂಚದ ಹಣ ಮರಳಿಸುತ್ತಿರುವ ಅತ್ಯರೂಪದ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿದೆ.ಬಂಗಾಳದ ಬಿಜೆಪಿ ಸರ್ಕಾರ, ಭ್ರಷ್ಟಾಚಾರ ಆರೋಪ ಹೊರಿಸಿ ಇತ್ತೀಚೆಗೆ ಕೆಲ ಟಿಎಂಸಿ ನಾಯಕರನ್ನು ಬಂಧಿಸಿತ್ತು. ಜತೆಗೆ ಈ ಹಿಂದೆ ಹಣಕ್ಕೆ ಗೂಂಡಾಗಿರಿ ಮಾಡಿದ್ದ ಹಲವು ಟಿಎಂಸಿ ನಾಯಕರ ಮೇಲೆ ಜನರೇ ದಾಳಿ ನಡೆಸಿದ ಹಲವು ಘಟನೆಗಳು ನಡೆದಿದ್ದವು. ಅದರ ಬೆನ್ನಲ್ಲೇ ‘ಸರ್ಕಾರದ ಯೋಜನೆಗಳನ್ನು ಕೊಡಿಸುತ್ತೇನೆ’ ಎಂದು ಮಮತಾ ಸರ್ಕಾರದ ಅವಧಿಯಲ್ಲಿ ಜನರಿಂದ ವಸೂಲಿ ಮಾಡಿದ ಕಮಿಷನ್ ಹಣವನ್ನು ತಾವಾಗಿಯೇ ಹಿಂತಿರುಗಿಸುತ್ತಿದ್ದಾರೆ.
ಇಲ್ಲಿನ ದಕ್ಷಿಣ-24 ಪರಗಣ ಜಿಲ್ಲೆ ನಾಮ್‌ಖಾನಾದಲ್ಲಿ ಸ್ಥಳೀಯ ಟಿಎಂಸಿ ನಾಯಕರೊಬ್ಬರು, ‘ಪ್ರಧಾನ ಮಂತ್ರಿ ವಸತಿ ಯೋಜನೆಯಡಿ ಮನೆ ಕೊಡಿಸುತ್ತೇನೆ’ ಎಂದು ಮಮತಾ ಬ್ಯಾನರ್ಜಿ ಅಧಿಕಾರದಲ್ಲಿದ್ದಾಗ 45 ಮಂದಿಯಿಂದ ಕಮಿಷನ್ ರೂಪದಲ್ಲಿ ತಲಾ 5000 ರು. ಸುಲಿಗೆ ಮಾಡಿದ್ದರು ಎನ್ನಲಾಗಿತ್ತು.
ಇದೀಗ ಆ ನಾಯಕ, ತಾನು ಪೀಕಿದ್ದ ತಲಾ 5000 ರು. ಹಣವನ್ನು, ಎಲ್ಲ 45 ಫಲಾನುಭವಿಗಳಿಗೂ ಸೋಮವಾರ ಬಹಿರಂಗವಾಗಿಯೇ ವಾಪಸ್ ನೀಡಿದ್ದಾನೆ.
ಇನ್ನು ಪಚಗಢ ಗ್ರಾಮ ಪಂಚಾಯತ್ ವ್ಯಾಪ್ತಿಯ ಫಕೀರರ್ ಕುಥಿ ಎಂಬಲ್ಲಿ ಪಂಚಾಯತ್ ಸದಸ್ಯರೊಬ್ಬರು ಶಾಲಾ ಮೈದಾನದಲ್ಲಿ ಜನರನ್ನು ಒಟ್ಟು ಸೇರಿಸಿ ಹಣ ಮರಳಿಸಿದ್ದಾರೆ. ಇನ್ನು ಕೆಲ ಕಡೆ ಸುಲಿಗೆ ಹಣ ಪಡೆದಿದ್ದ ಟಿಎಂಸಿ ನಾಯಕರು ನಾಪತ್ತೆಯಾಗಿದ್ದಾರೆ. ಆದರೆ ಬಂಧನಕ್ಕೆ ಭಯ ಬಿದ್ದು ಅವರ ಪೋಷಕರು ಫಲಾನುಭವಿಗೆ ಹಣ ಮರಳಿಸಿರುವ ಬಗ್ಗೆಯೂ ವರದಿಯಾಗಿದೆ.==