ಸ್ತ್ರೀಯರಿಗೆ ವಾರ್ಷಿಕ 1 ಲಕ್ಷ ರು, ರೈತರಿಗೆ 2 ಲಕ್ಷ ರು. ಕೃಷಿ ಸಾಲ ಮನ್ನಾ!

| Published : Apr 01 2024, 12:51 AM IST / Updated: Apr 01 2024, 08:20 AM IST

ಸ್ತ್ರೀಯರಿಗೆ ವಾರ್ಷಿಕ 1 ಲಕ್ಷ ರು, ರೈತರಿಗೆ 2 ಲಕ್ಷ ರು. ಕೃಷಿ ಸಾಲ ಮನ್ನಾ!
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸಭೆ ಚುನಾವಣೆ ನಡೆಯಲಿರುವ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷ ಕರ್ನಾಟಕ ಮಾದರಿಯಲ್ಲಿ 9 ಗ್ಯಾರಂಟಿಗಳನ್ನು ಘೋಷಿಸಿದೆ.

ವಿಜಯವಾಡ: ವಿಧಾನಸಭೆ ಚುನಾವಣೆ ನಡೆಯಲಿರುವ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷ ಕರ್ನಾಟಕ ಮಾದರಿಯಲ್ಲಿ 9 ಗ್ಯಾರಂಟಿಗಳನ್ನು ಘೋಷಿಸಿದೆ. ಇದರಲ್ಲಿ 2 ಲಕ್ಷ ರು.ವರೆಗಿನ ಕೃಷಿ ಸಾಲ ಮನ್ನಾ ಕೂಡ ಇದೆ. ಆಂಧ್ರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷೆ ವೈ.ಎಸ್‌. ಶರ್ಮಿಳಾ ಈ ಗ್ಯಾರಂಟಿಗಳನ್ನು ಘೋಷಣೆ ಮಾಡಿದರು.

9 ಗ್ಯಾರಂಟಿಗಳು: ಆಂಧ್ರಪ್ರದೇಶಕ್ಕೆ 10 ವರ್ಷಗಳ ವಿಶೇಷ ವರ್ಗದ ಸ್ಥಾನಮಾನ, ಪ್ರತಿ ಬಡ ಮಹಿಳೆಗೆ ಮಾಸಿಕ ₹ 8,500 ಮಹಿಳಾ ಮಹಾಲಕ್ಷ್ಮಿ ರು. ಸಹಾಯಧನ ಪಾವತಿ, ರೈತರಿಗೆ ₹ 2 ಲಕ್ಷ ಕೃಷಿ ಸಾಲ ಮನ್ನಾ, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ- ಇವುಗಳಲ್ಲಿ ಪ್ರಮುಖವಾದವು.

ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕನಿಷ್ಠ ಕೂಲಿ ₹400ಕ್ಕೆ ಹೆಚ್ಚಳ, ಕೆ.ಜಿ.ಯಿಂದ ಪಿಜಿವರೆಗೆ ಉಚಿತ ಶಿಕ್ಷಣ, ಅಧಿಕಾರಕ್ಕೆ ಬಂದ ತಕ್ಷಣ ರಾಜ್ಯದಲ್ಲಿ ಖಾಲಿ ಇರುವ 2.25 ಲಕ್ಷ ಹುದ್ದೆಗಳ ಭರ್ತಿ, ಪ್ರತಿ ಬಡ ವಸತಿ ರಹಿತರಿಗೆ ಮನೆಯ ಯಜಮಾನಿ ಹೆಸರಲ್ಲಿ ₹5 ಲಕ್ಷ ಮೌಲ್ಯದ ಪಕ್ಕಾ ಮನೆ, ಸ್ವಂತ ಮನೆಯಿಲ್ಲದ ಕುಟುಂಬದ ಅರ್ಹ ಯಜಮಾನತಿಗೆ ಮಾಸಿಕ 4,000 ರು. ಸಾಮಾಜಿಕ ಭದ್ರತಾ ಪಿಂಚಣಿ ಮತ್ತು ಅಂಗವಿಕಲರಿಗೆ 6,000 ರು. ಪಿಂಚಣಿ ನೀಡುವ ಗ್ಯಾರಂಟಿ ಪ್ರಕಟಿಸಲಾಗಿದೆ.