ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಹಾಗೆ ಮಹಾರಾಷ್ಟ್ರದಲ್ಲಿ ವ್ಯಕ್ತಿಯೊಬ್ಬನಿಂದ ವಶಪಡಿಸಿಕೊಳ್ಳಬೇಕಿದ್ದ 1.45 ಕೋಟಿ ರು. ಹಣವನ್ನು ಪೊಲೀಸರು ಜಪ್ತಿ ಮಾಡದೆ ತಾವೇ ದೋಚಿರುವ ಘಟನೆ ನಡೆದಿದೆ. ಈ ಸಂಬಂಧ ಉಪವಿಭಾಗಾಧಿಕಾರಿ ಸೇರಿ 10 ಮಂದಿ ಪೊಲೀಸರು ಅಮಾನತುಗೊಂಡಿದ್ದಾರೆ.
ಸಿಯೋನಿ (ಮ.ಪ್ರ.) : ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಹಾಗೆ ಮಹಾರಾಷ್ಟ್ರದಲ್ಲಿ ವ್ಯಕ್ತಿಯೊಬ್ಬನಿಂದ ವಶಪಡಿಸಿಕೊಳ್ಳಬೇಕಿದ್ದ 1.45 ಕೋಟಿ ರು. ಹಣವನ್ನು ಪೊಲೀಸರು ಜಪ್ತಿ ಮಾಡದೆ ತಾವೇ ದೋಚಿರುವ ಘಟನೆ ನಡೆದಿದೆ. ಈ ಸಂಬಂಧ ಉಪವಿಭಾಗಾಧಿಕಾರಿ ಸೇರಿ 10 ಮಂದಿ ಪೊಲೀಸರು ಅಮಾನತುಗೊಂಡಿದ್ದಾರೆ.
ಉದ್ಯಮಿಯೊಬ್ಬರಿಗೆ ಸೇರಿದ್ದ 1.45 ಕೋಟಿ ರು. ಹಣವನ್ನು ಲಾರಿಯಲ್ಲಿ ಸಾಗಿಸುತ್ತಿದ್ದಾಗ ಹವಾಲಾ ಹಣ ಎಂಬ ಆರೋಪದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದರು. ಆದರೆ ಹಣವನ್ನು ಜಪ್ತಿ ಲೆಕಕ್ಕೆ ತೋರಿಸುವ ಬದಲು ಚಾಲಕನಿಗೆ ಥಳಿಸಿ ದುಡ್ಡನ್ನು ದೋಚಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಉದ್ಯಮಿ ಮತ್ತು ಚಾಲಕ ದೂರಿನ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಹಣ ವಶಪಡಿಸಿಕೊಂಡ ಪೊಲೀಸರು ಅದರ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಿಳಿಸಿರಲಿಲ್ಲ ಎನ್ನಲಾಗಿದೆ, ಇನ್ನು ಪೊಲೀಸರ ವಿರುದ್ಧ ಗಂಭೀರ ಆರೋಪ ಕೇಳಿ ಬರುತ್ತಿದ್ದಂತೆ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಲಾರಿಯಲ್ಲಿ 2.96 ಕೋಟಿ ರು. ಹಣವಿತ್ತು ಎನ್ನುವ ಶಂಕೆ ವ್ಯಕ್ತವಾಗಿತ್ತು, ತನಿಖೆ ನಿಖರ ಅಂಕಿ ಅಂಶ ಗೊತ್ತಾಗಲಿದೆ.