18ನೇ ಲೋಕಸಭಾ ಚುನಾವಣೆಗೆ ಒಟ್ಟು 751 ನೊಂದಾಯಿತ ರಾಜಕೀಯ ಪಕ್ಷಗಳು ಸ್ಪರ್ಧೆ ಮಾಡಿದ್ದು, 15ನೇ (2009) ಲೋಕಸಭಾ ಚುನಾವಣೆಗೆ ಹೋಲಿಸಿದಲ್ಲಿ ಶೇ.104ರಷ್ಟು ಹೆಚ್ಚಳವಾಗಿದೆ  c

ನವದೆಹಲಿ: 18ನೇ ಲೋಕಸಭಾ ಚುನಾವಣೆಗೆ ಒಟ್ಟು 751 ನೊಂದಾಯಿತ ರಾಜಕೀಯ ಪಕ್ಷಗಳು ಸ್ಪರ್ಧೆ ಮಾಡಿದ್ದು, 15ನೇ (2009) ಲೋಕಸಭಾ ಚುನಾವಣೆಗೆ ಹೋಲಿಸಿದಲ್ಲಿ ಶೇ.104ರಷ್ಟು ಹೆಚ್ಚಳವಾಗಿದೆ ಅಂದರೆ ದ್ವಿಗುಣಗೊಂಡಿದೆ ಎಂದು ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ವರದಿತಿಳಿಸಿದೆ.

2024ರ ಲೋಕಸಭಾ ಚುನಾವಣೆಯಲ್ಲಿ 543 ಕ್ಷೇತ್ರಗಳಿಗೆ ಒಟ್ಟು 8,360 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಈ ಪೈಕಿ 1,333 ಮಂದಿ ರಾಷ್ಟ್ರೀಯ ಪಕ್ಷಗಳಿಂದಲೂ, 532 ಮಂದಿ ರಾಜ್ಯ ಮಟ್ಟದ ಪಕ್ಷಗಳಿಂದಲೂ, 2,580 ಮಂದಿ ಸ್ಥಳೀಯ ನೋಂದಾಯಿತ ಪಕ್ಷಗಳಿಂದಲೂ ಕಣಕ್ಕಿಳಿದಿದ್ದಾರೆ. ಇದರ ಜೊತೆಗೆ 3,915 ಪಕ್ಷೇತರರೂ ಸ್ಪರ್ಧಿಸಿದ್ದಾರೆ.

ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಲ್ಲಿ 443 ಮಂದಿಯ ಮೇಲೆ ಕ್ರಿಮಿನಲ್‌ ಮೊಕದ್ದಮೆಗಳಿದ್ದರೆ, ರಾಜ್ಯ ಮಟ್ಟದ ಪಕ್ಷಗಳಲ್ಲಿ 249 ಮಂದಿಯ ಮೇಲೆ ಕ್ರಿಮಿನಲ್‌ ಪ್ರಕರಣಗಳಿವೆ. ಅಲ್ಲದೆ ಸ್ಥಳೀಯ ಪಕ್ಷಗಳ ಅಭ್ಯರ್ಥಿಗಳಲ್ಲಿ 401 ಮಂದಿಯ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ. ಇನ್ನು ರಾಷ್ಟ್ರೀಯ ಪಕ್ಷಗಳಲ್ಲಿ 906 ಕೋಟ್ಯಧೀಶ ಅಭ್ಯರ್ಥಿಗಳಿದ್ದರೆ, ರಾಜ್ಯ ಮಟ್ಟದ ಪಕ್ಷಗಳಲ್ಲಿ 421 ಮಂದಿ ಕೋಟ್ಯಧೀಶ ಅಭ್ಯರ್ಥಿಗಳಿದ್ದಾರೆ.

ರಾಜಕೀಯ ಪಕ್ಷಗಳ ಸಂಖ್ಯೆ

ವರ್ಷ ಪಕ್ಷಗಳ ಸಂಖ್ಯೆ

2009368

2014464

2019677

2024751