ಸಾರಾಂಶ
ಕರ್ನಾಟಕದ ಪಿ ಸಿ ಗದ್ದಿಗೌಡರ್ ಸೇರಿ 12 ಜನರಿಗೂ ಸಂಸದ ರತ್ನ ಗೌರವ ಪ್ರದಾನ ಮಾಡಲಾಗಿದೆ.
ನವದೆಹಲಿ: ಕರ್ನಾಟಕದ ಲೋಕಸಭಾ ಸಂಸದ ಪಿ.ಸಿ.ಗದ್ದಿಗೌಡರ್ ಅವರ ನೇತೃತ್ವದ ಕೃಷಿ ಕುರಿತ ಸ್ಥಾಯಿ ಸಮಿತಿ ಸೇರಿದಂತೆ ಮೂರು ಸಂಸದೀಯ ಸ್ಥಾಯಿ ಸಮಿತಿಗಳಿಗೆ ಶುಕ್ರವಾರ ಇಲ್ಲಿ ನಡೆದ ಸಮಾರಂಭದಲ್ಲಿ ಸಂಸದ ಮಹಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ಸಮಿತಿಗಳು ನಡೆಸಿದ ಸಭೆ ಮತ್ತು ಅದರ ಆಧಾರದಲ್ಲಿ ಸಲ್ಲಿಕೆ ಮಾಡಿದ ವರದಿಗಳನ್ನು ಆಧರಿಸಿ ನಾಲ್ಕು ಸಮಿತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಗೆ ಪಾತ್ರವಾದ ಉಳಿದ ಸಮಿತಿಗಳೆಂದರೆ ಜಯಂತ್ ಸಿನ್ಹಾ ನೇತೃತ್ವದ ಹಣಕಾಸು ಸಮಿತಿ, ಸಾರಿಗೆ ಮತ್ತು ಪ್ರವಾಸೋದ್ಯಮ ಸಮಿತಿಯ ಮಾಜಿ ಅಧ್ಯಕ್ಷ ಟಿ.ಜಿ.ವೆಂಕಟೇಶ್ ಮತ್ತು ಹಾಲಿ ಅಧ್ಯಕ್ಷ ವಿಜಯ್‌ಸಾಯಿ ರೆಡ್ಡಿ.ಉಳಿದಂತೆ ಗಣನೀಯ ಸೇವೆ ಸಲ್ಲಿಸಿದ 12 ಸಂಸದರಿಗೆ ಸಂಸದ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಚೆನ್ನೈ ಮೂಲದ ಪ್ರೈಮ್ ಪಾಯಿಂಟ್ ಫೌಂಡೇಷನ್ ಈ ಪ್ರಶಸ್ತಿಗಳನ್ನು ನೀಡುತ್ತದೆ.