ಸಾರಾಂಶ
ಫೋರ್ಬ್ಸ್ ಬಿಡುಗಡೆ ಮಾಡಿರುವ 38 ಯುವ ಸಾಧಕರಲ್ಲಿ ರಶ್ಮಿಕಾ ಕೂಡ ಒಬ್ಬರಾಗಿದ್ದಾರೆ.
ನವದೆಹಲಿ: ತಮ್ಮ ತಮ್ಮ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿ, ಇತರರ ಮೇಲೆ ಪ್ರಭಾವ ಬೀರುತ್ತಿರುವ 30 ವರ್ಷದೊಳಗಿನ ಸಾಧಕರ ಪಟ್ಟಿಯೊಂದನ್ನು ಫೋರ್ಬ್ಸ್ ಇಂಡಿಯಾ ಬಿಡುಗಡೆ ಮಾಡಿದೆ.
ಇದರಲ್ಲಿ ಕನ್ನಡತಿ, ನಟಿ ರಶ್ಮಿಕಾ ಮಂದಣ್ಣ ಕೂಡಾ ಸ್ಥಾನ ಪಡೆದುಕೊಂಡಿದ್ದಾರೆ. 19 ವಿವಿಧ ವಲಯಗಳಲ್ಲಿ ಸಾಧನೆ ಮಾಡಿದ 38 ಸಾಧಕರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರೆಲ್ಲಾ ಮುಂದಿನ ದಶಕದಲ್ಲಿ ಗಮನಿಸಬೇಕಾದ ಪ್ರತಿಭೆಗಳು ಎಂದು ವರದಿ ಹೇಳಿದೆ.
ಪಟ್ಟಿಯಲ್ಲಿ ಸ್ಥಾನ ಪಡೆದ ಇತರೆ ಕೆಲ ಪ್ರಮುಖರೆಂದರೆ ಜೆಪ್ಟೋ ಸಂಸ್ಥಾಪಕರಾದ ಅದಿತ್ ಪಲಿತಾ ಮತ್ತು ಕಲ್ವಲ್ಯ ವೋಹ್ರಾ, ಎಂಸ್ಟ್ಯಾಕ್‌ನ ಶ್ರೇಯಸ್ ಚೋಪ್ರಾ, ನೆಕ್ಟ್ಟ್‌ವೇವ್‌ನ ಅನುಪಮ್ ಪೆರ್ಡಾಲಾ, ಶಶಾಂಕ್ ರೆಡ್ಡಿ, ಟಾರ್ಚಿಟ್‌ನ ಹನ್ನಿ ಭಾಗ್‌ಚಂದಾನಿ, ಅಥ್ಲೀಟ್‌ಗಳಾದ ಪಾರುಲ್ ಚೌಧರಿ, ಜ್ಯೋತಿ ಯರ್ರಾಜಿ, ನಟಿ ರಾಧಿಕಾ ಮದನ್, ಲೂಪ್‌ವರ್ಮ್‌ನ ಅಂಕಿತ್ ಅಲೋಕ, ಸ್ಟುಡಿಯೋ ಸಾರ್ಟಡ್‌ನ ನೇತ್ರಾ ಅಜ್ಜಂಪುರ, ಪ್ರೇಮ್‌ಜೀ ಇನ್ವೆಸ್ಟ್‌ನ ಸೀತಾಲಕ್ಷ್ಮಿ ನಾರಾಯಣನ್ ಸೇರಿದ್ದಾರೆ.