ಮುದ್ದಿನ ಶ್ವಾನ ಸಾವನ್ನಪ್ಪಿದ್ದಕ್ಕೆ 12 ವರ್ಷದ ಬಾಲಕಿ ಆತ್ಮಹತ್ಯೆ

| Published : Apr 29 2024, 01:38 AM IST / Updated: Apr 29 2024, 05:00 AM IST

ಸಾರಾಂಶ

ಮನೆಯಲ್ಲಿ ಸಾಕಿದ ನಾಯಿ, ಬೆಕ್ಕಿನ ಮರಿಗಳೊಂದಿಗೆ ಮನೆಯಲ್ಲಿನ ಮಕ್ಕಳು ಅತೀವ ಪ್ರೀತಿ ಬೆಳೆಸಿಕೊಂಡಿರುತ್ತಾರೆ.

ಚಂಡೀಗಢ: ಮನೆಯಲ್ಲಿ ಸಾಕಿದ ನಾಯಿ, ಬೆಕ್ಕಿನ ಮರಿಗಳೊಂದಿಗೆ ಮನೆಯಲ್ಲಿನ ಮಕ್ಕಳು ಅತೀವ ಪ್ರೀತಿ ಬೆಳೆಸಿಕೊಂಡಿರುತ್ತಾರೆ. ಅವುಗಳು ಕಾಣದೇ ಹೋದಾಗ ದುಃಖ ಪಡುವುದು ಕೂಡಾ ಸಾಮಾನ್ಯ. ಆದರೆ ಮೆಚ್ಚಿನ ನಾಯಿ ಮಾರಿ ಸಾವನ್ನಪ್ಪಿದ್ದಕ್ಕೆ ನೊಂದ 12 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಹರ್ಯಾಣದಲ್ಲಿ ನಡೆದಿದೆ.

3 ತಿಂಗಳ ಹಿಂದಷ್ಟೇ ಸ್ಥಳೀಯ ಕುಟುಂಬವೊಂದು ಪುಟ್ಟ ನಾಯಿಮರಿಯನ್ನು ಮನೆಗೆ ತಂದು ಸಾಕಿತ್ತು. ಅದರ ಜೊತೆಗೆ 12 ವರ್ಷದ ಬಾಲಕಿ ಅತೀವ ಪ್ರೀತಿ ಬೆಳೆಸಿಕೊಂಡಿದ್ದರು. ಆದರೆ 5 ದಿನದ ಹಿಂದೆ ದಿಢೀರನೆ ನಾಯಿ ಮರಿ ಸಾವನ್ನಪ್ಪಿದೆ.

 ಇದರಿಂದ ತೀವ್ರ ನೊಂದಿದ್ದ ಬಾಲಕಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಸರಿಯಾಗಿ ಊಟ ತಿಂಡಿ ಮಾಡುವುದನ್ನು ಕೂಡಾ ಬಿಟ್ಟಿದ್ದಳು. ಈ ನಡುವೆ ಶನಿವಾರ ಸಂಜೆ ಬಾಲಕಿಯ ತಾಯಿ ಮತ್ತು ಕಿರಿಯ ಸೋದರಿ ಸಮೀಪದ ಅಂಗಡಿಗೆ ಹೋಗಿದ್ದ ವೇಳೆ 12 ವರ್ಷದ ಬಾಲಕಿ ತನ್ನ ನೆಚ್ಚಿನ ನಾಯಿ ಮರಿಯ ನೋವನ್ನು ತಡೆಯಲಾಗದೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.