ಸಾರಾಂಶ
ದೇಶದಲ್ಲಿ ಮಾದಕ ವಸ್ತುಗಳ ನಿಗ್ರಹಕ್ಕೆಂದೇ ಪ್ರತ್ಯೇಕ ಸಹಾಯವಾಣಿ 1933 ಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜು.18ರ ಗುರುವಾರದಂದು ಲೋಕಾರ್ಪಣೆಗೊಳಿಸಲಿದ್ದಾರೆ.
ನವದೆಹಲಿ: ದೇಶದಲ್ಲಿ ಮಾದಕ ವಸ್ತುಗಳ ನಿಗ್ರಹಕ್ಕೆಂದೇ ಪ್ರತ್ಯೇಕ ಸಹಾಯವಾಣಿ 1933 ಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜು.18ರ ಗುರುವಾರದಂದು ಲೋಕಾರ್ಪಣೆಗೊಳಿಸಲಿದ್ದಾರೆ.
1933 ಸಂಖ್ಯೆಯು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಯಾವುದೇ ವ್ಯಕ್ತಿಯು ಮಾದಕ ವಸ್ತುಗಳಿಗೆ ಸಂಬಂಧಿಸಿದ ದೂರು, ಸಲಹೆ ಹಾಗೂ ಮಾಹಿತಿಗಳನ್ನು ಇದರಲ್ಲಿ ಹಂಚಿಕೊಳ್ಳಬಹುದಾಗಿದೆ. ಅಲ್ಲದೇ ಇದಕ್ಕೆ ಕರೆ ಮಾಡಿದವರ ಮಾಹಿತಿಯನ್ನು ಗುಪ್ತವಾಗಿ ಇಡಲಾಗುತ್ತದೆ.ಇದರೊಂದಿಗೆ info.ncbmanas@gov.in ಈಮೇಲ್ ವಿಳಾಸ ಹಾಗೂ ncbmanas.gov.in ವೆಬ್‌ಸೈಟ್‌ಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಸಾರ್ವಜನಿಕರು ಇದರಲ್ಲಿ ಯಾವುದಕ್ಕಾದರೂ ಮಾದಕ ವಸ್ತು ಮಾರಾಟ, ಖರೀದಿ, ಸರಬರಾಜು ಇತ್ಯಾದಿ ದೂರುಗಳನ್ನು ಕಳುಹಿಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.