ಸಾರಾಂಶ
ಕೆನರಾ ಬ್ಯಾಂಕ್‌ಗೆ 200 ಕೋಟಿ ರು. ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮಿಳುನಾಡಿನ ಮಾಜಿ ಸಿಎಂ ದಿ। ಜಯಲಲಿತಾರ ಆಪ್ತೆ ಶಶಿಕಲಾ ಅವರಿಗೆ ಸೇರಿದ ಚೆನ್ನೈ ಮತ್ತು ಹೈದರಾಬಾದ್‌ನಲ್ಲಿರುವ ಸುಮಾರು ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ದಾಳಿ ನಡೆಸಿದೆ.
ಚೆನ್ನೈ: ಕೆನರಾ ಬ್ಯಾಂಕ್‌ಗೆ 200 ಕೋಟಿ ರು. ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮಿಳುನಾಡಿನ ಮಾಜಿ ಸಿಎಂ ದಿ। ಜಯಲಲಿತಾರ ಆಪ್ತೆ ಶಶಿಕಲಾ ಅವರಿಗೆ ಸೇರಿದ ಚೆನ್ನೈ ಮತ್ತು ಹೈದರಾಬಾದ್‌ನಲ್ಲಿರುವ ಸುಮಾರು ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ದಾಳಿ ನಡೆಸಿದೆ.
ಶಶಿಕಲಾ ಅವರಿಗೆ ಸೇರಿದ 10 ಆಸ್ತಿಗಳಿಗೆ ಮಾರ್ಗ್ ಗ್ರೂಪ್‌ನ ಜಿಆರ್‌ಕೆ ರೆಡ್ಡಿ ಎಂಬುವವರು ಬೇನಾಮಿ ಆಗಿದ್ದರು ಎಂಬ ಆರೋಪವಿದ್ದು, ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇಡಿ ಶೋಧ ಕೈಗೊಂಡಿದೆ. ಈ ಮೊದಲು, ರೆಡ್ಡಿ ಶಶಿಕಲಾರ ಬೇನಾಮಿಯಾಗಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಆದೇಶಿಸಿತ್ತು.
ಇದೀಗ 200 ಕೋಟಿ ರು. ಬ್ಯಾಂಕ್ ವಂಚನೆಗೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಆದರೆ ಇದರಲ್ಲಿ ಶಶಿಕಲಾರ ಹೆಸರನ್ನು ಉಲ್ಲೇಖಿಸಿರಲಿಲ್ಲ ಎಂಬುದು ಗಮನಾರ್ಹ.