ಸಾರಾಂಶ
ಪಿಎಂ ಕಿಸಾನ್ ಯೋಜನೆಯ 19ನೆಯ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಿಡುಗಡೆ ಮಾಡಲಿದ್ದಾರೆ.
ನವದೆಹಲಿ: ಪಿಎಂ ಕಿಸಾನ್ ಯೋಜನೆಯ 19ನೆಯ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಿಡುಗಡೆ ಮಾಡಲಿದ್ದಾರೆ.
ಈ ಯೋಜನೆಯಡಿ ಪ್ರತಿ 4 ತಿಂಗಳಿಗೊಮ್ಮೆ 2 ಸಾವಿರ ರು.ನಂತೆ ರೈತರಿಗೆ ವಾರ್ಷಿಕ ಒಟ್ಟು 6 ಸಾವಿರ ರು. ನೀಡಲಾಗುತ್ತದೆ. ಬಿಹಾರದ ಭಾಗಲ್ಪುರದಲ್ಲಿ ಮೋದಿ ಅವರು ಯೋಜನೆಯ 19ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಇದರಿಂದ 9.8 ಕೋಟಿ ರೈತರ ಖಾತೆಗೆ ನೇರವಾಗಿ 22 ಸಾವಿರ ಕೋಟಿ ರು. ವರ್ಗಾವಣೆಯಾಗಲಿದೆ. ಇದುವರೆಗೆ ಯೋಜನೆಯಡಿ 3.46 ಲಕ್ಷ ಕೋಟಿ ರು. ನೀಡಲಾಗಿದೆ ಎಂದು ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.