ಲಂಚ ಪಡೆದು ಚೀನಾ ನಾಗರಿಕರಿಗೆ ವೀಸಾ ನೀಡಿದ ಹಗರಣಕ್ಕೆ ಸಂಬಂಧಿಸಿ ಮಾಜಿ ಗೃಹ ಸಚಿವ ಚಿದಂಬರಂ ಪುತ್ರ. ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂಗೆ ಇದೀಗ ಸಂಕಷ್ಟ ಎದುರಾಗಿದೆ. ಪ್ರಕರಣದಲ್ಲಿ ಕಾರ್ತಿ ಸೇರಿ ಆರು ಮಂದಿ ವಿರುದ್ಧ ದೋಷಾರೋಪ ಹೊರಿಸಲು ದೆಹಲಿ ಕೋರ್ಟ್‌ ಮಂಗಳವಾರ ಆದೇಶಿಸಿದೆ.

ದೋಷಾರೋಪ ಹೊರಿಸಲು ದೆಹಲಿ ಕೋರ್ಟ್‌ ಸೂಚನೆ

- 2011ರಲ್ಲಿ ಲಂಚ ಪಡೆದು ವೀಸಾ ನೀಡಿದ ಕೇಸ್‌

ನವದೆಹಲಿ: ಲಂಚ ಪಡೆದು ಚೀನಾ ನಾಗರಿಕರಿಗೆ ವೀಸಾ ನೀಡಿದ ಹಗರಣಕ್ಕೆ ಸಂಬಂಧಿಸಿ ಮಾಜಿ ಗೃಹ ಸಚಿವ ಚಿದಂಬರಂ ಪುತ್ರ. ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂಗೆ ಇದೀಗ ಸಂಕಷ್ಟ ಎದುರಾಗಿದೆ. ಪ್ರಕರಣದಲ್ಲಿ ಕಾರ್ತಿ ಸೇರಿ ಆರು ಮಂದಿ ವಿರುದ್ಧ ದೋಷಾರೋಪ ಹೊರಿಸಲು ದೆಹಲಿ ಕೋರ್ಟ್‌ ಮಂಗಳವಾರ ಆದೇಶಿಸಿದೆ.

ವಿಶೇಷ ನ್ಯಾಯಾಧೀಶ(ಸಿಬಿಐ) ದಿಗ್‌ ವಿನಯ್‌ ಸಿಂಗ್‌ ಅವರು ಒಟ್ಟು ಎಂಟು ಆರೋಪಿಗಳಲ್ಲಿ ಏಳು ಮಂದಿ ವಿರುದ್ಧ ದೋಷಾರೋಪ ನಿಗದಿಗೆ ಆದೇಶ ಮಾಡಿದೆ.

2011ರಲ್ಲಿ ವಿದ್ಯುತ್‌ ಕಂಪನಿಯೊಂದರಲ್ಲಿ ಕೆಲಸ ಮಾಡಲು ಚೀನಾ ಪ್ರಜೆಗಳಿಗೆ ವೀಸಾ ನೀಡುವ ಸಂಬಂಧ ಲಂಚ ಪಡೆದ ಪ್ರಕರಣದಲ್ಲಿ ಕಾರ್ತಿ ಚಿದಂಬರಂ ಸೇರಿ ಹಲವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

ಆ ಸಂದರ್ಭದಲ್ಲಿ ಕಾರ್ತಿ ತಂದೆ ಚಿದಂಬರಂ ಅವರು ಕೇಂದ್ರ ಗೃಹ ಸಚಿವರಾಗಿದ್ದರು. ಕಾರ್ತಿ ಅವರ ವಿರುದ್ಧ ಕ್ರಿಮಿನಲ್‌ ಸಂಚು, ಸರ್ಕಾರಿ ನೌಕರನಿಗೆ ಲಂಚ ನೀಡಿದ ಆರೋಪ ಹೊರಿಸಲಾಗಿದೆ.

ಈ ಕುರಿತ ಚಾರ್ಜ್‌ಶೀಟ್‌ ಅನ್ನು ವಿಶೇಷ ಕೋರ್ಟ್‌ ಮುಂದೆ ಸಲ್ಲಿಸಲಾಗಿದ್ದು, ಕಾರ್ತಿ ಚಿದಂಬರಂ, ಅವರ ಆತ್ಮೀಯರಾದ ಎಸ್‌.ಭಾಸ್ಕರರಾಮ್‌, ತಲಾವಂಡಿ ಸಬೋ ಪವರ್‌ ಲಿ(ಟಿಎಸ್‌ಪಿಎಲ್‌), ಬೆಲ್‌ ಟೂಲ್ಸ್‌ ಸೇರಿ ಹಲವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

==

ಚಿನ್ನದ ಬೆಲೆ ₹1.4 ಲಕ್ಷ, ಬೆಳ್ಳಿ ಬೆಲೆ ₹2.17 ಲಕ್ಷಕ್ಕೆ ಏರಿಕೆ: ಇದು ಸಾರ್ವಕಾಲಿಕ ಗರಿಷ್ಠ

ನವದೆಹಲಿ: ದೇಶದಲ್ಲಿ ಬಂಗಾರ ಮತ್ತು ಬೆಳ್ಳಿಯ ಬೆಲೆ ಏರಿಕೆ ಪರ್ವ ಮುಂದುವರಿದಿದ್ದು, ಮಂಗಳವಾರ ಶೇ.99.9 ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆ 1,40,850 ರು.ಗೆ ತಲುಪಿದೆ. ಬೆಳ್ಳಿ ಬೆಲೆಯಲ್ಲೂ ಜಿಗಿತವಾಗಿದ್ದು, 1 ಕೆಜಿ ಬೆಳ್ಳಿಯ ಬೆಲೆ 2,17,250 ರು.ಗೆ ಏರಿಕೆಯಾಗಿದೆ. ಸೋಮವಾರ ಚಿನ್ನದ ಬೆಲೆ 10 ಗ್ರಾಂಗೆ 1,38,200 ರು. ಇತ್ತು. ಒಂದೇ ದಿನ 2,650 ರು. ಜಿಗಿತವಾಗಿದೆ. 2,14,500 ರು. ಇದ್ದ ಬೆಳ್ಳಿ ಬೆಲೆಯಲ್ಲಿ 2,750 ರು. ಏರಿಕೆಯಾಗಿದೆ. 2024ರ ಡಿ.31ರಂದು ಚಿನ್ನದ ದರ 78,950 ರು. ಇತ್ತು. ಒಂದು ವರ್ಷದ ಅವಧಿಯಲ್ಲಿ ಶೇ.78.40ರಷ್ಟು ಏರಿಕೆ ದಾಖಲಿಸಿದೆ. ಕಳೆದ ವರ್ಷ ಈ ಅವಧಿಯಲ್ಲಿ 89,700 ರು. ಇದ್ದ ಬೆಳ್ಳಿ ದರದಲ್ಲಿ ಶೇ.142.2ರಷ್ಟು ಜಿಗಿತವಾಗಿದೆ.