ಸಾರಾಂಶ
ಕೊಲ್ಲಂ: ಓಣಂ ಹಬ್ಬದ ಅಂಗವಾಗಿ ಕೇರಳದ ಕೊಲ್ಲಂ ಜಿಲ್ಲೆಯ ಪಾರ್ಥಸಾರಥಿ ದೇವಸ್ಥಾನದಲ್ಲಿ ಹೂವಿನ ರಂಗೋಲಿ ಹಾಕಿದ 27 ಆರ್‌ಎಸ್‌ಎಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೇಗುಲದ ಎದುರು ಕಾರ್ಯಕರ್ತರು, ಆರ್‌ಎಸ್‌ಎಸ್‌ನ ಧ್ವಜ ಮತ್ತು ಆಪರೇಷನ್ ಸಿಂದೂರ ಎಂದು ಹೂವಿನಲ್ಲಿ ರಂಗೋಲಿ ಬರೆದಿದ್ದರು. ಆದರೆ ಅನುಮತಿ ಇಲ್ಲದೇ ದೇಗುಲ ಆವರಣದಲ್ಲಿ ಹೂವಿನ ರಂಗೋಲಿ ಬಿಡಿಸಲಾಗಿದೆ ಎಂದು ದೇಗುಲದ ಆಡಳಿತ ಮಂಡಳಿ ದೂರು ನೀಡಿದ ಹಿನ್ನೆಲೆಯಲ್ಲಿ 27 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ಈ ಕ್ರಮವನ್ನು ಬಿಜೆಪಿ ಖಂಡಿಸಿದ್ದು, ತಕ್ಷಣದಲ್ಲಿ ಎಫ್‌ಐಆರ್ ರದ್ದುಗೊಳಿಸದಿದ್ದರೆ ಕೋರ್ಟ್ ಕದ ತಟ್ಟುವುದಾಗಿ ಎಚ್ಚರಿಸಿದೆ.
ಕೇರಳವನ್ನು ಜಮಾತ್ ಆಳುತ್ತಿದೆಯೇ?
ದೇಶದಲ್ಲೇ ಮೊದಲ ಬಾರಿಗೆ ಹೂವಿನ ರಂಗೋಲಿ ಹಾಕಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ. ‘ಆಪರೇಷನ್ ಸಿಂದೂರ’ ಎಂದು ಬರೆದು, ಹೂವಿನ ರಂಗೋಲಿ ಹಾಕಿದ್ದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಸರ್ಕಾರ ಏನನ್ನು ಸಾಧಿಸಲು ಪ್ರಯತ್ನಿಸುತ್ತಿದೆ? ಕೇರಳವನ್ನು ಜಮಾತ್-ಎ-ಇಸ್ಲಾಮಿ ಆಳುತ್ತಿದೆಯೇ ಅಥವಾ ಕೇರಳ ಪಾಕಿಸ್ತಾನದ ಆಡಳಿತದಲ್ಲಿದೆಯೇ?
-ರಾಜೀವ್ ಚಂದ್ರಶೇಖರ್, ಕೇರಳ ಬಿಜೆಪಿ ರಾಜ್ಯಾಧ್ಯಕ್ಷ