ಛತ್ತೀಸ್‌ಗಢ: 30 ನಕ್ಸಲರ ಶರಣಾಗತಿ, 16 ಜನ ಸೆರೆ

| Published : May 15 2024, 01:35 AM IST

ಸಾರಾಂಶ

ಛತ್ತೀಸ್‌ಗಢದಲ್ಲಿ 30 ನಕ್ಸಲರು ಶರಣಾಗಿದ್ದು, 16 ಜನರನ್ನು ಸೆರೆ ಹಿಡಯಲಾಗಿದೆ.

ಬಿಜಾಪುರ: ಛತ್ತಿಸಗಢದಲ್ಲಿ ಮಾವೋವಾದಿಗಳ ವಿರುದ್ಧ ಪೊಲೀಸರ ಬೇಟೆ ಮುಂದುವರೆದಿದ್ದು, 2 ದಿನದಲ್ಲಿ ಬರೋಬ್ಬರಿ 46 ನಕ್ಸಲರು ಪೊಲೀಸರ ವಶಕ್ಕೆ ಬಂಧಿದ್ದಾರೆ.

ಸೋಮವಾರ 6 ಮಹಿಳೆಯರು ಸೇರಿದಂತೆ 30 ಜನ ಶರಣರಾಗಿದ್ದು, ಆ ಪೈಕಿ 9 ಜನರ ಸುಳಿವು ನೀಡಿದವರಿಗೆ ಈ ಹಿಂದೆ ಪೊಲೀಸರು 39 ಲಕ್ಷ ಬಹುಮಾನ ಪೊಲೀಸರು ಘೋಷಿಸಿದ್ದರು.

ಭಾನುವಾರವೂ ಪೊಲೀಸರು ನಕ್ಸಲರ ವಿರುದ್ಧ ಕಾರ್ಯಾಚರಣೆ ವೇಳೆ 6 ಮಹಿಳೆಯರು ಸೇರಿದಂತೆ 16 ನಕ್ಸಲರನ್ನು ಬಂಧಿಸಿದ್ದರು.

ಆ ಪೈಕಿ ಪೈಕಿ 11 ಜನರ ಸುಳಿವು ನೀಡಿದವರಿಗೆ ಈ ಹಿಂದೆ ಪೊಲೀಸರು 41 ಲಕ್ಷ ಬಹುಮಾನ ಘೋಷಿಸಿದ್ದರು.

ಬಂಧಿತರಿಂದ ಕೆಲ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಈ ವರ್ಷ ರಾಜ್ಯದಲ್ಲಿ 100 ನಕ್ಸಲರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.