ಗುಜರಾತ್‌ನಲ್ಲಿ ₹1800 ಕೋಟಿ ಮೌಲ್ಯದ 300 ಕೆಜಿ ಡ್ರಗ್ಸ್ ವಶ - ಉಗ್ರ ನಿಗ್ರಹ ದಳ, ಕರಾವಳಿ ರಕ್ಷಣಾ ಪಡೆ ಕಾರ್ಯಾಚರಣೆ

| N/A | Published : Apr 15 2025, 01:05 AM IST / Updated: Apr 15 2025, 04:22 AM IST

ಗುಜರಾತ್‌ನಲ್ಲಿ ₹1800 ಕೋಟಿ ಮೌಲ್ಯದ 300 ಕೆಜಿ ಡ್ರಗ್ಸ್ ವಶ - ಉಗ್ರ ನಿಗ್ರಹ ದಳ, ಕರಾವಳಿ ರಕ್ಷಣಾ ಪಡೆ ಕಾರ್ಯಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ರಮವಾಗಿ ಸಾಗಿಸುತ್ತಿದ್ದ 1,800 ಕೋಟಿ ರು. ಮೌಲ್ಯದ 300 ಕೆ.ಜಿ. ಮಾದಕ ವಸ್ತುವನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಮತ್ತು ಕರಾವಳಿ ರಕ್ಷಣಾ ಪಡೆಗಳು ವಶಪಡಿಸಿಕೊಂಡಿವೆ.

ಅಹಮದಾಬಾದ್: ಅಕ್ರಮವಾಗಿ ಸಾಗಿಸುತ್ತಿದ್ದ 1,800 ಕೋಟಿ ರು. ಮೌಲ್ಯದ 300 ಕೆ.ಜಿ. ಮಾದಕ ವಸ್ತುವನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಮತ್ತು ಕರಾವಳಿ ರಕ್ಷಣಾ ಪಡೆಗಳು ವಶಪಡಿಸಿಕೊಂಡಿವೆ.

ಏ.12 ಮತ್ತು 13ರ ಮಧ್ಯರಾತ್ರಿ ಗುಜರಾತ್‌ನ ಭಾರತೀಯ ಸಮುದ್ರ ಗಡಿ ರೇಖೆ ಬಳಿ ಕಾರ್ಯಾಚರಣೆ ನಡೆದಿದೆ. ರಕ್ಷಣಾ ಪಡೆಯ ಹಡಗು ಸಮೀಪಿಸುತ್ತಿರುವುದನ್ನು ನೋಡಿ ಕಳ್ಳಸಾಗಣೆದಾರರು ಮಾದಕವಸ್ತುಗಳನ್ನು ಸಮುದ್ರಕ್ಕೆ ಎಸೆದು, ಅಂತಾರಾಷ್ಟ್ರೀಯ ಗಡಿ ದಾಟಿ ಪರಾರಿಯಾಗಿದ್ದಾರೆ. ವಶಪಡಿಸಿಕೊಂಡ ವಸ್ತುವು ಮೆಥಾಂಫೆಟಮೈನ್ ಎಂದು ಶಂಕಿಸಲಾಗಿದೆ.

‘ರಕ್ಷಣಾ ಪಡೆಯ ಹಡಗು ಮತ್ತು ಕಳ್ಳಸಾಗಣೆದಾರರ ದೋಣಿಯ ನಡುವೆ ಸಾಕಷ್ಟು ದೂರವಿದ್ದುದರಿಂದ, ಕಳ್ಳರು ತಪ್ಪಿಸಿಕೊಂಡರು. ಕರಾವಳಿ ರಕ್ಷಣಾ ಪಡೆ ಕತ್ತಲೆಯಲ್ಲಿ ಸಮುದ್ರದಲ್ಲಿ ಬಿದ್ದಿದ್ದ ಡ್ರಗ್ಸ್ ಅನ್ನು ಹುಡುಕಿ ತೆಗೆದಿದೆ. ಅವುಗಳನ್ನು ಹೆಚ್ಚಿನ ತನಿಖೆಗಾಗಿ ಪೋರಬಂದರ್‌ಗೆ ತರಲಾಗಿದೆʼ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.