ಸಾರಾಂಶ
ಹೋಟೆಲೊಂದರಲ್ಲಿ ಮೌತ್ ಫ್ರೆಷ್ನರ್ ತಿಂದು ಐವರು ರಕ್ತದ ವಾಂತಿ ಮಾಡಿಕೊಂಡ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿದೆ. ಘಟನೆ ಬಳಿಕ ಐವರೂ ಆಸ್ಪತ್ರೆಗೆ ದಾಖಲಾಗಿದೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ನವದೆಹಲಿ: ಹೋಟೆಲೊಂದರಲ್ಲಿ ಮೌತ್ ಫ್ರೆಷ್ನರ್ ತಿಂದು ಐವರು ರಕ್ತದ ವಾಂತಿ ಮಾಡಿಕೊಂಡ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿದೆ.
ಘಟನೆ ಬಳಿಕ ಐವರೂ ಆಸ್ಪತ್ರೆಗೆ ದಾಖಲಾಗಿದೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂಕಿತ್ ಕುಮಾರ್ ದಂಪತಿ ಹಾಗೂ ಅವರ ಮೂವರು ಸ್ನೇಹಿತರು ಹೋಟೆಲಿಗೆ ತೆರಳಿ ಆಹಾರ ಸೇವಿಸಿದ ಬಳಿಕ ಮೌತ್ ಫ್ರೆಷ್ನರ್ ಪಡೆದುಕೊಂಡರು.
ಅದನ್ನು ಬಾಯಿಗೆ ಹಾಕಿಕೊಂಡ ಬಳಿಕ ಏಕಾಏಕಿ ಬಾಯಿಯಲ್ಲಿ ಸುಡುವ ಅನುಭವವಾಗಿ ಅದನ್ನು ಹೊರಗೆ ಉಗುಳಿದರು. ಇದರ ಬೆನ್ನಲ್ಲೇ ಮತ್ತೊಬ್ಬರು ಬಾಯಿಂದ ರಕ್ತದ ವಾಂತಿ ಮಾಡಿದ್ದಾರೆ.
ಇದಕ್ಕೆ ಪರಿಹಾರ ಹುಡುಕಲು ಬಾಯಿಗೆ ನೀರು ಹಾಕಿಕೊಂಡರು ಸಮಸ್ಯೆ ಬಗೆ ಹರಿಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ.