ಸಾರಾಂಶ
ಸಂಸತ್ತಿನ ಉಭಯ ಸದನಗಳಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ಬೆನ್ನಲ್ಲೇ, ಹಿಂದಿನ ವಕ್ಫ್ ಕಾನೂನಿನಿಂದ ತೊಂದರೆ ಅನುಭವಿಸಿದ್ದ ಕೇರಳದ ಮುನಂಬಂ ಗ್ರಾಮದ 50 ಮಂದಿ ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾದರು.
ಕೊಚ್ಚಿ: ಸಂಸತ್ತಿನ ಉಭಯ ಸದನಗಳಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ಬೆನ್ನಲ್ಲೇ, ಹಿಂದಿನ ವಕ್ಫ್ ಕಾನೂನಿನಿಂದ ತೊಂದರೆ ಅನುಭವಿಸಿದ್ದ ಕೇರಳದ ಮುನಂಬಂ ಗ್ರಾಮದ 50 ಮಂದಿ ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾದರು.
ರಾಜೀವ್ ಚಂದ್ರಶೇಖರ್ ಮತ್ತು ಎನ್‌ಡಿಎ ಕೂಟದ ಇತರ ನಾಯಕರ ಸಮ್ಮುಖದಲ್ಲಿ ಮುನಂಬಂ ಗ್ರಾಮಸ್ಥರು ಬಿಜೆಪಿ ಸದಸ್ಯತ್ವ ಪಡೆದರು. ಅಧಿಕೃತ ದಾಖಲೆಗಳಿದ್ದರೂ ತಮ್ಮ ಭೂಮಿ ಅತಿಕ್ರಮಣಕ್ಕೆ ಮುಂದಾಗಿದ್ದ ಕೇರಳ ವಕ್ಫ್ ಮಂಡಳಿ ವಿರುದ್ಧ 174 ದಿನಗಳ ಮುನಂಬಂನ ಕ್ರೈಸ್ತ ಸಂತ್ರಸ್ತರು ಪ್ರತಿಭಟನೆ ನಡೆಸುತ್ತಿದ್ದರು.
ಆದರೆ ತಿದ್ದುಪಡಿ ಬೆನ್ನಲ್ಲೇ ಗ್ರಾಮಸ್ಥರು ಪ್ರಧಾನಿಗೆ ಜೈಕಾರ ಕೂಗಿ ಸಂಭ್ರಮಿಸಿದ್ದರು. ಈ ಹಿಂದೆ ಕೂಡಾ ರಾಜೀವ್ ಚಂದ್ರಶೇಖರ್ ಸೇರಿದಂತೆ ಬಿಜೆಪಿ ನಾಯಕರು ಮುನಂಬಂಗೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.