ಶೇ.51ರಷ್ಟು ಭಾರತೀಯರಿಂದ ವಾರಕ್ಕೆ 49 ಗಂಟೆ ಕೆಲಸ : ಹೆಚ್ಚು ಕೆಲಸ ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನದಲ್ಲಿ

| Published : Sep 26 2024, 05:45 AM IST

Work
ಶೇ.51ರಷ್ಟು ಭಾರತೀಯರಿಂದ ವಾರಕ್ಕೆ 49 ಗಂಟೆ ಕೆಲಸ : ಹೆಚ್ಚು ಕೆಲಸ ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನದಲ್ಲಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಶೇ.51ರಷ್ಟು ಜನರು ವಾರದಲ್ಲಿ 49 ಗಂಟೆಗಿಂತಲೂ ಅಧಿಕ ಅವಧಿ ಕೆಲಸ ಮಾಡುತ್ತಾರೆ. ವಿಶ್ವದಲ್ಲಿ ಅತಿಹೆಚ್ಚು ಕೆಲಸ ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ ಎಂದು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ ವರದಿ ಹೇಳಿದೆ.

ನವದೆಹಲಿ: ದೇಶದಲ್ಲಿ ಶೇ.51ರಷ್ಟು ಜನರು ವಾರದಲ್ಲಿ 49 ಗಂಟೆಗಿಂತಲೂ ಅಧಿಕ ಅವಧಿ ಕೆಲಸ ಮಾಡುತ್ತಾರೆ. ವಿಶ್ವದಲ್ಲಿ ಅತಿಹೆಚ್ಚು ಕೆಲಸ ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ ಎಂದು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ ವರದಿ ಹೇಳಿದೆ.

ಐಎಲ್‌ಒ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ವಾರಕ್ಕೆ ಉದ್ಯೋಗಿಗಳ ಸರಾಸರಿ ಕೆಲಸದ ಅವಧಿ 46.7 ಗಂಟೆ. ಆದರೆ ಶೇ. 51ರಷ್ಟು ಜನರು 49 ಗಂಟೆಗಿಂತಲೂ ಅಧಿಕ ದುಡಿಯುತ್ತಿದ್ದಾರೆ. ಭೂತಾನ್‌ ನಂತರ ವಿಶ್ವದಲ್ಲಿ ಅತಿ ಹೆಚ್ಚು ಕೆಲಸದ ಅವಧಿ ಹೊಂದಿರುವ ದೇಶದಲ್ಲಿ ಭಾರತವಿದೆ. ಅಗ್ರ 10ರ ಪಟ್ಟಿಯಲ್ಲಿ ದಕ್ಷಿಣ ಏಷ್ಯಾದ ಬಾಂಗ್ಲಾ , ಪಾಕಿಸ್ತಾನವೂ ಇದೆ.

ಐಎಲ್‌ಒ ವರದಿ ಪ್ರಕಾರ, ನೆದರ್ಲೆಂಡ್‌ (31.6 ಗಂಟೆ) ಮತ್ತು ನಾರ್ವೆ(33.7) ದೇಶಗಳಲ್ಲಿ ಸಮತೋಲಿನ ಕೆಲಸದ ಅವಧಿಯನ್ನು ಹೊಂದಿವೆ.

ಕೆಲಸ ಜೀವನದ ಶೈಲಿ, ಮಾನಸಿಕ ಆರೋಗ್ಯ, ದೇಶದ ಕಾರ್ಮಿಕ ನೀತಿಗಳು ಕೂಡ ಭಾರತದಲ್ಲಿ ಉದ್ಯೋಗಿಗಳ ಕೆಲಸದ ಅವಧಿ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿ ಹೇಳಿದೆ.

ಕಚೇರಿ ಕುರ್ಚಿಯಿಂದ ಬಿದ್ದು ಎಚ್‌ಡಿಎಫ್‌ಸಿ ಉದ್ಯೋಗಿ ಸಾವು: ಒತ್ತಡ ಕಾರಣ?

ಲಖನೌ: ಕೆಲಸದ ಒತ್ತಡದಿಂದ ಪುಣೆಯ ಇ.ವೈ ಕಂಪನಿ ಮಹಿಳಾ ಉದ್ಯೋಗಿ ಅನ್ನಾ ಸಾವಿನ ಪ್ರಕರಣ ಮಾಸುವ ಮುನ್ನವೇ ಉತ್ತರ ಪ್ರದೇಶದಲ್ಲಿ ಅದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಕೆಲಸ ಮಾಡುತ್ತಿರುವಾಗಲೇ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಹಿಳಾ ಉದ್ಯೋಗಿ ಕುರ್ಚಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ.

45 ವರ್ಷದ ಸದಾಫ್‌ ಫಾತಿಮಾ ಮೃತ ಉದ್ಯೋಗಿ. ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವಾಗ ಕುರ್ಚಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಶವ ಪರೀಕ್ಷೆಯ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಿದೆ. ಆದರೆ ಆಕೆಯ ಸಹದ್ಯೋಗಿಗಳು ಹೇಳುವಂತೆ ಸದಾಫ್‌ ಅತಿಯಾದ ಕೆಲಸದ ಒತ್ತಡದಿಂದ ಇದ್ದರು ಎನ್ನಲಾಗಿದೆ.

ಇತ್ತೀಚಿಗಷ್ಟೇ ಪುಣೆಯ ಇ. ವೈ ಕಂಪನಿಯ 26 ವರ್ಷದ ಮಹಿಳಾ ಉದ್ಯೋಗಿ ಅನ್ನಾ ಸೆಬಾಸ್ಟಿಯನ್ ಸಾವಿಗೆ ಕೆಲಸದ ಒತ್ತಡವೇ ಕಾರಣ ಎಂದು ಆಕೆ ಪೋಷಕರು ಆರೋಪಿಸಿದ್ದರು.