ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ನಾಯಕತ್ವದ ಮೇಲೆ ವಿಶ್ವಾಸವಿಲ್ಲ, ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಿ ಶುಕ್ರವಾರವಷ್ಟೇ ವಿಧಾನಸಭಾ ಸದಸ್ಯತ್ವ ಮತ್ತು ಆಪ್‌ಗೆ ರಾಜೀನಾಮೆ ನೀಡಿದ್ದ ದೆಹಲಿಯ 8 ಶಾಸಕರು ಶನಿವಾರ ಭಾರತೀಯ ಜನತಾ ಪಕ್ಷ ಸೇರಿದ್ದಾರೆ.
ನವದೆಹಲಿ: ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ನಾಯಕತ್ವದ ಮೇಲೆ ವಿಶ್ವಾಸವಿಲ್ಲ, ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಿ ಶುಕ್ರವಾರವಷ್ಟೇ ವಿಧಾನಸಭಾ ಸದಸ್ಯತ್ವ ಮತ್ತು ಆಪ್‌ಗೆ ರಾಜೀನಾಮೆ ನೀಡಿದ್ದ ದೆಹಲಿಯ 8 ಶಾಸಕರು ಶನಿವಾರ ಭಾರತೀಯ ಜನತಾ ಪಕ್ಷ ಸೇರಿದ್ದಾರೆ.
ಫೆ.5ರಂದು ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ಅದರ ಮುನ್ನಾ ಈ ದಿಢೀರ್ ಬೆಳವಣಿಗೆ ನಡೆದಿದೆ. ಬಿಜೆಪಿ ಸೇರಿದ ಶಾಸಕರಿಗೆ ಗೆಲ್ಲುವ ಸಾಧ್ಯತೆ ಇಲ್ಲ ಎನ್ನುವ ಕಾರಣ ನೀಡಿ ಆಪ್ ಟಿಕೆಟ್ ನಿರಾಕರಿಸಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬೈಜಯಂತ್ ಪಾಂಡಾ ಸಮ್ಮುಖದಲ್ಲಿ ಆಪ್‌ನಿಂದ ಹೊರಬಿದ್ದ ಶಾಸಕರು ಬಿಜೆಪಿ ಸೇರಿದರು.
Latest Videos
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.