ಭಾರತದ ಶೇ.95ರಷ್ಟು ರಫ್ತಿಗೆ ಅಮೆರಿಕ ತೆರಿಗೆ ಎಫೆಕ್ಟ್‌ ಇಲ್ಲ!

| N/A | Published : Aug 08 2025, 05:24 AM IST

India US

ಸಾರಾಂಶ

ಭಾರತದ ಆಮದಿನ ಮೇಲೆ ಶೇ.50ರಷ್ಟು ತೆರಿಗೆ ಹೇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶದಿಂದ ಭಾರತದ ರಫ್ತಿನ ಮೇಲೆ ಹೆಚ್ಚಿನ ಪರಿಣಾಮ ಬೀರದು. ಭಾರತದ ಒಟ್ಟಾರೆ ರಫ್ತಿನ ಪೈಕಿ ಶೇ.95ರಷ್ಟು ಉತ್ಪನ್ನಗಳು ಹೆಚ್ಚುವರಿ ತೆರಿಗೆ ಹೊರೆಯಿಂದ ದೂರ ಇದೆ ಎಂದು ಬಿಜೆಪಿ ಹೇಳಿದೆ.

ನವದೆಹಲಿ: ಭಾರತದ ಆಮದಿನ ಮೇಲೆ ಶೇ.50ರಷ್ಟು ತೆರಿಗೆ ಹೇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶದಿಂದ ಭಾರತದ ರಫ್ತಿನ ಮೇಲೆ ಹೆಚ್ಚಿನ ಪರಿಣಾಮ ಬೀರದು. ಭಾರತದ ಒಟ್ಟಾರೆ ರಫ್ತಿನ ಪೈಕಿ ಶೇ.95ರಷ್ಟು ಉತ್ಪನ್ನಗಳು ಹೆಚ್ಚುವರಿ ತೆರಿಗೆ ಹೊರೆಯಿಂದ ದೂರ ಇದೆ ಎಂದು ಬಿಜೆಪಿ ಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ಪಕ್ಷ 2024-25ರಲ್ಲಿ ಭಾರತದಿಂದ ಅಮೆರಿಕಕ್ಕೆ 820 ಶತಕೋಟಿ ಡಾಲರ್‌ (70 ಲಕ್ಷ ಕೋಟಿ ರು. ) ಮೌಲ್ಯದ ವಸ್ತುಗಳ ರಫ್ತಾಗಿತ್ತು. ಈ ಪೈಕಿ ಅಂದಾಜು 40 ಶತಕೋಟಿ ಡಾಲರ್‌ (66 ಲಕ್ಷ ಕೋಟಿ ರು.) ಮೌಲ್ಯದ ವಸ್ತುಗಳು ಹೊಸದಾಗಿ ಹೇರಿರುವ ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ಅಂದರೆ ಒಟ್ಟು ರಫ್ತಿನ ಶೇ.95ರಷ್ಟು ವಸ್ತುಗಳ ತೆರಿಗೆ ವ್ಯಾಪ್ತಿ ಬರಲ್ಲ. ಶೇ.5ರಷ್ಟು ಮಾತ್ರವೇ ತೆರಿಗೆ ವ್ಯಾಪ್ತಿಗೆ ಒಳಪಡಲಿದೆ. ಎಲೆಕ್ಟ್ರಾನಿಕ್ಸ್‌, ಔಷಧ, ಆಟೋ ಬಿಡಿಭಾಗ, ಲೋಹ, ಸೇವಾ ವಲಯ ತೆರಿಗೆ ವ್ಯಾಪ್ತಿಯಿಂದ ಹೊರಗಿದೆ ಎಂದು ಹೇಳಿದೆ.

ವಿಶೇಷವೆಂದರೆ ಉದ್ಯಮ ವಲಯಗಳು ಮಾತ್ರ ಅಮೆರಿಕದ ಹೆಚ್ಚುವರಿ ತೆರಿಗೆ ಒಟ್ಟಾರೆ ರಫ್ತಿನಲ್ಲಿ ಶೇ.40-50ರಷ್ಟು ಕಡಿತಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದವು.

2024-25

ಅಮೆರಿಕ್ಕೆ ಭಾರತ ಒಟ್ಟು ರಫ್ತು

7000000 ಲಕ್ಷ ಕೋಟಿ ರು.

ಹೆಚ್ಚುವರಿ ತೆರಿಗೆ ಪರಿಣಾಮ

350000

(ಶೇ.5)

ತೆರಿಗೆ ವ್ಯಾಪ್ತಿಗೆ ಒಳಪಡದ ವಸ್ತು

6630000 ಲಕ್ಷ ಕೋಟಿ

(ಶೇ.95)

Read more Articles on