ಸಾರಾಂಶ
ಕನ್ನಡಪ್ರಭ ವಾರ್ತೆ ಯಮಕನಮರಡಿ
ಭಾರತ ದೇಶವನ್ನು ಸಮಗ್ರ ಅಭಿವೃದ್ಧಿ ಪಥದತ್ತ ಕೊಂಡೊಯ್ಯುದು ಪ್ರಧಾನಿ ಮೋದಿಯವರು ಭಾರತ ದೇಶವು ವಿಶ್ವಗುರುವನ್ನಾಗಿ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹುಂದ್ರಿ ಬಣ್ಣಿಸಿದರು.ಬಸ್ಸಾಪುರ ಗ್ರಾಮದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ಯಮಕನಮರಡಿ ಮತಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ತಾವು ಭಯದ ವಾತಾವರಣದಲ್ಲಿ ಬದುಕುತ್ತಿದ್ದೇವೆಂದು ತಿಳಿದುಕೊಂಡಿದ್ದರು. ಆದರೆ, ಇಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಸೇರಿದ ಸಂಖ್ಯೆಯನ್ನು ನೋಡಿದರೇ ಅದಕ್ಕೆ ವಿರೋಧವಾಗಿದೆ ಎಂದರು.ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ನಂತರ ದೇಶದಲ್ಲಿ ಸಮಗ್ರ ಅಭಿವೃದ್ಧಿಯಾಗಿದೆ. 24 ಗಂಟೆಗಳಲ್ಲಿ ದಿನಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡುವ ಏಕೈಕ ಪ್ರಧಾನಮಂತ್ರಿ ಎಂದರು.ಕಾಂಗ್ರೆಸ್‌ನವರು ಪಾಕಿಸ್ತಾನದಿಂದ ಬಂದಿಲ್ಲ. ಅವರು ಕೂಡ ಭಾರತ ದೇಶದವರು. ಆದರೆ, ಅವರಿಗೂ ನಮಗೂ ತುಂಬಾ ವ್ಯತ್ಯಾಸವಿದೆ. ಯಾವುದೇ ಕಾರ್ಯಕ್ರಮ ಸಭೆ, ಸಮಾರಂಭಗಳನ್ನು ಆರಂಭಿಸಬೇಕಾದರೇ ತಮ್ಮ ನಾಯಕರ ಹೆಸರುಗಳಿಂದ ಜೈ ಎಂದು ಹೇಳುತ್ತಾರೆ. ಆದರೆ, ಭಾರತೀಯ ಜನತಾ ಪಕ್ಷದವರು ಭಾರತ ಮಾತಾ ಕೀ ಎಂದು ಘೋಷಣೆ ಹೇಳಿ ಆರಂಭಿಸುತ್ತಾರೆ ಎಂದರು.ಈ ವೇಳೆಯಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ನಿರ್ದೇಶಕ ಕಲಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮೃತ ಕುಲಕರ್ಣಿ, ಜಿಲ್ಲಾ ಖಜಾಂಚಿ ಅಭಯ ಮಾನ್ವಿ, ಬಿಜೆಪಿ ಯಮಕನಮರಡಿ ಉತ್ತರ ಮಂಡಳ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ದಕ್ಷಿಣ ಮಂಡಲ ಅಧ್ಯಕ್ಷ ಅಪ್ಪಯ್ಯ ಜಾಜರಿ, ಸಿದ್ದಲಿಂಗ ಸಿದ್ದಗೌಡ, ಗುರುಸಿದ್ಧ ಪಾಯನ್ನವರ, ರಾಜನ ಮಠಪತಿ, ಈರಣ್ಣ ಗುರವ, ಬಸವರಾಜ ಪೂಜೇರಿ, ಅಡಿವೆಪ್ಪ ಜಿಂಡ್ರಾಳಿ, ಯಲ್ಲಪ್ಪ ಗಡಕರಿ, ಸತೀಶ ಪೂಜೇರಿ, ಬಾಳಯ್ಯ ತವಗಮಠ, ಅಡಿವೆಪ್ಪ ಹುಂದ್ರಿ, ರಾಜು ಹೊನಗೌಡ್ರು, ಅಡಿವೆಪ್ಪ ಸಿದ್ದಗೌಡ್ರ, ಅಜ್ಜಪ್ಪ ರಾಮಾಪುರ, ಚಂದ್ರು ಕುರಿ, ಮಲ್ಲಪ್ಪ ಗೋಪಾಲಪ್ಪಗೋಳ ಹಾಗೂ ಯಮಕನಮರಡಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಇದ್ದರು.
ಯಮಕನಮರಡಿ ಮತಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ತಾವು ಭಯದ ವಾತಾವರಣದಲ್ಲಿ ಬದುಕುತ್ತಿದ್ದೇವೆಂದು ತಿಳಿದುಕೊಂಡಿದ್ದರು. ಆದರೆ, ಇಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಸೇರಿದ ಸಂಖ್ಯೆಯನ್ನು ನೋಡಿದರೇ ಅದಕ್ಕೆ ವಿರೋಧವಾಗಿದೆ.
-ಬಸವರಾಜ ಹುಂದ್ರಿ, ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ.ದೇಶವನ್ನು ಆಳಿದ ಯಾವ ಪ್ರಧಾನಿ ಕೂಡ ಮಾಡದೇ ಇದ್ದ ರಾಮಮಂದಿರ ಕಟ್ಟಿದ್ದಾರೆ. ದೇಶದ ಹಿತಕ್ಕಾಗಿ ದುಡಿಯುವ ಪ್ರಧಾನಿ ಸಿಗುವುದು ತುಂಬಾ ವಿರಳ.-ಸಂಜಯ ಪಾಟೀಲ,
ಮಾಜಿ ಶಾಸಕರು.