ಅಜ್ಜನಿಗೆ ತುರ್ತು ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೇ ಬೈಕ್‌ ನುಗ್ಗಿಸಿದ ಭೂಪ!

| Published : Feb 12 2024, 01:30 AM IST / Updated: Feb 12 2024, 11:35 AM IST

ಅಜ್ಜನಿಗೆ ತುರ್ತು ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೇ ಬೈಕ್‌ ನುಗ್ಗಿಸಿದ ಭೂಪ!
Share this Article
  • FB
  • TW
  • Linkdin
  • Email

ಸಾರಾಂಶ

ಅಜ್ಜನಿಗೆ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಆಸ್ಪತ್ರೆಯ ಒಳಗೇ ಬೈಕ್‌ ನುಗ್ಗಿಸಿದ ಘಟನೆ ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಸತ್ನಾ: ಅಜ್ಜನಿಗೆ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಆಸ್ಪತ್ರೆಯ ಒಳಗೇ ಬೈಕ್‌ ನುಗ್ಗಿಸಿದ ಘಟನೆ ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. 

ನೀರಜ್‌ ಗುಪ್ತಾ ಆಸ್ಪತ್ರೆಯ ಒಳಗೇ ಬೈಕ್‌ ನುಗ್ಗಿಸಿದ ವ್ಯಕ್ತಿ. ಆತ ತನ್ನ ಅಜ್ಜನನ್ನು ಬೈಕ್‌ ಹಿಂದೆ ಕೂರಿಸಿಕೊಂಡು ನೇರವಾಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ದ್ವಾರದ ಬಳಿಗೆ ಚಲಾಯಿಸಿಕೊಂಡು ಹೋಗಿ ನಿಲ್ಲಿಸಿದ್ದಾನೆ.

ಬಳಿಕ ಅಲ್ಲಿನ ಆಸ್ಪತ್ರೆ ಸಿಬ್ಬಂದಿಯ ಸಹಾಯದಿಂದ ಅಜ್ಜನನ್ನು ಒಳಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ.

ಈ ಕುರಿತು ವಿಷಯ ತಿಳಿದ ಬಳಿಕ ಅಜ್ಜನಿಗೆ ಚಿಕಿತ್ಸೆ ನೀಡಿದ ವೈದ್ಯರು, ನೀರಜ್‌ ಗುಪ್ತಾಗೆ ಛೀಮಾರಿ ಹಾಕಿದ್ದಾರೆ.