ಮುಂಬೈನಲ್ಲೊಂದು 3 ಈಡಿಯಟ್ಸ್‌ ರೀತಿ ಹೆರಿಗೆ!

| N/A | Published : Oct 17 2025, 01:04 AM IST

ಸಾರಾಂಶ

ಜನಪ್ರಿಯ ಹಿಂದಿ ಚಿತ್ರ 3 ಈಡಿಯಟ್ಸ್‌ ಚಿತ್ರದ ನಾಯಕ ರಾಂಚೋ (ಅಮೀರ್‌ ಖಾನ್‌) ಗೆಳತಿಯ ಸೋದರಿಗೆ, ಮೊಬೈಲ್‌ನಲ್ಲಿ ವೈದ್ಯೆಯ ಸಹಾಯ ಪಡೆದು ಹೆರಿಗೆ ಮಾಡಿಸುವ ಸನ್ನಿವೇಶವನ್ನೇ ನೆನಪಿಸುವ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ವಿಕಾಶ್‌ ಬೇಂದ್ರೆ ಎಂಬ ವ್ಯಕ್ತಿ  ಗರ್ಭಿಣಿಯೊಬ್ಬಳ ಜೀವ ಕಾಪಾಡಿದ್ದಾರೆ.

 ಮುಂಬೈ: ಜನಪ್ರಿಯ ಹಿಂದಿ ಚಿತ್ರ 3 ಈಡಿಯಟ್ಸ್‌ ಚಿತ್ರದ ನಾಯಕ ರಾಂಚೋ (ಅಮೀರ್‌ ಖಾನ್‌) ಗೆಳತಿಯ ಸೋದರಿಗೆ, ಮೊಬೈಲ್‌ನಲ್ಲಿ ವೈದ್ಯೆಯ ಸಹಾಯ ಪಡೆದು ಹೆರಿಗೆ ಮಾಡಿಸುವ ಸನ್ನಿವೇಶವನ್ನೇ ನೆನಪಿಸುವ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ವಿಕಾಶ್‌ ಬೇಂದ್ರೆ ಎಂಬ ವ್ಯಕ್ತಿ ಅಕ್ಷರಶಃ ಅಮೀರ್‌ರಂತೆ ಗರ್ಭಿಣಿಯೊಬ್ಬಳ ಜೀವ ಕಾಪಾಡಿದ್ದಾರೆ.

ಏನಿದು ಘಟನೆ?:

ಸೋಮವಾರ ತಡರಾತ್ರಿ ಮುಂಬೈನ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ತುಂಬು ಗರ್ಭಿಣಿಯೊಬ್ಬಳಿಗೆ ಹೆರಿಗೆ ನೋವು ಶುರುವಾಗಿ ಒಡ್ಡಾಡತೊಡಗಿದ್ದಾಳೆ. ಇದನ್ನು ಎಲ್ಲರೂ ಆತಂಕದಿಂದ ನೋಡುತ್ತಿದ್ದರೆ, ವಿಕಾಶ್‌ ಬೇಂದ್ರೆ ಎಂಬೊಬ್ಬ ಪ್ರಯಾಣಿಕ ಕೂಡಲೇ ಎಮರ್ಜೆನ್ಸಿ ಚೈನ್‌ ಎಳೆದು ರೈಲನ್ನು ನಿಲ್ಲಿಸಿದ್ದಾರೆ. ಆಕೆಯನ್ನು ರೈಲಿನಿಂದ ಇಳಿಸಿ ಆಸ್ಪತ್ರೆಗೆ ಕರೆದೊಯ್ಯೋಣವೆಂದರೆ ಅದಾಗಲೇ ಮಗು, ತಾಯಿಯ ದೇಹದಿಂದ ಅರ್ಧ ಹೊರಕ್ಕೆ ಬಂದಿತ್ತು. ಮತ್ತೊಂದೆಡೆ ಆ್ಯಂಬುಲೆನ್ಸ್‌ ಕೂಡಾ ಸಿಗಲಿಲ್ಲ.

ಈ ವೇಳೆ ತನ್ನ ವೈದ್ಯೆ ಸ್ನೇಹಿತೆಯೊಬ್ಬರಿಗೆ ಕರೆ ಮಾಡಿದ ವಿಕಾಶ್‌, ಅಲ್ಲಿನ ಪರಿಸ್ಥಿತಿ ವಿವರಿಸಿದ್ದಾರೆ. ಜೊತೆಗೆ ಆಕೆಯ ಸಹಾಯದಿಂದ ರೈಲಿನೊಳಗೇ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ವೈದ್ಯೆಯ ಸೂಚನೆಯಂತೆ ಮಗುವನ್ನು ನಿಧಾನವಾಗಿ ಹೊರಗೆ ಎಳೆದು, ಬಳಿಕ ಹತ್ತಿರದ ಟೀ ಸ್ಟಾಲ್‌ನಿಂದ ತಂದ ಕತ್ತರಿಯಿಂದ ಬಳಸಿ ಹೊಕ್ಕುಳ ಬಳ್ಳಿ ಕತ್ತರಿಸಿ ಯಶಸ್ವಿಯಾಗಿ ಹೆರಿಗೆ ಮಾಡಿಸುವ ಮೂಲಕ ಎರಡು ಜೀವಗಳನ್ನು ಕಾಪಾಡಿದ್ದಾರೆ.

ಘಟನೆ ಬಗ್ಗೆ ಛಾಯಾಗ್ರಾಹಕರಾಗಿರುವ ಬೇಂದ್ರೆ ಮಾತನಾಡಿ, ‘ಮೊದಲ ಬಾರಿ ಈ ಕೆಲಸ ಮಾಡಿದೆ. ತುಂಬಾ ಭಯವಾಗುತ್ತಿತ್ತು’ ಎಂದಿದ್ದಾರೆ.

Read more Articles on