ಸಾರಾಂಶ
ಮುಂದಿನ ವರ್ಷದ ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಪ್ ನೇತಾರ ಅರವಿಂದ್ ಕೇಜ್ರಿವಾಲ್ ಮತ್ತೊಂದು ಭರ್ಜರಿ ಕೊಡುಗೆ ಪ್ರಕಟಿಸಿದ್ದು, ಆಪ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಹಿಂದೂ ಹಾಗೂ ಸಿಖ್ ಅರ್ಚಕರಿಗೆ ಮಾಸಿಕ 18 ಸಾವಿರ ರು. ಸಹಾಯಧನ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ನವದೆಹಲಿ : ಮುಂದಿನ ವರ್ಷದ ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಪ್ ನೇತಾರ ಅರವಿಂದ್ ಕೇಜ್ರಿವಾಲ್ ಮತ್ತೊಂದು ಭರ್ಜರಿ ಕೊಡುಗೆ ಪ್ರಕಟಿಸಿದ್ದು, ಆಪ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಹಿಂದೂ ಹಾಗೂ ಸಿಖ್ ಅರ್ಚಕರಿಗೆ ಮಾಸಿಕ 18 ಸಾವಿರ ರು. ಸಹಾಯಧನ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸೋಮವಾರ ಮಾತನಾಡಿದ ಕೇಜ್ರಿವಾಲ್, ಒಂದು ವೇಳೆ ಆಪ್ ಮರು ಆಯ್ಕೆಯಾದರೆ ‘ಪೂಜಾರಿ ಗ್ರಂಥಿ ಸಮ್ಮಾನ್ ಯೋಜನೆ’ ಜಾರಿಗೆ ತರಲಿದ್ದೇವೆ. ಅರ್ಚಕರು ಮತ್ತು ಗ್ರಂಥಿಗಳು (ಸಿಖ್ ಅರ್ಚಕರು) ನಮ್ಮ ಸಮಾಜದ ಮುಖ್ಯ ಭಾಗ. ಆದರೆ ಅವರು ಸಾಮಾನ್ಯವಾಗಿ ನಿರ್ಲಕ್ಷಿಸಲ್ಪಟ್ಟ ವರ್ಗವಾಗಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ನಾವು ಅವರನ್ನು ಬೆಂಬಲಿಸುವ ಯೋಜನೆ ಪರಿಚಯಿಸುತ್ತಿದ್ದೇವೆ. ಅದರ ಅಡಿಯಲ್ಲಿ ಮಾಸಿಕ 18 ಸಾವಿರ ರು.ಗಳನ್ನು ಅವರು ಪಡೆಯಲಿದ್ದಾರೆ. ಮಂಗಳವಾರದಿಂದಲೇ ನೋಂದಣಿ ಆರಂಭವಾಗಲಿದೆ’ ಎಂದರು.