ಸಾರಾಂಶ
ಮಲಪ್ಪುರಂ (ಕೇರಳ): 2019ರಲ್ಲಿ ಕೇರಳದಲ್ಲಿ ಸಂಭವಿಸಿದ್ದ ಮೈಸೂರಿನ ಪಾರಂಪರಿಕ ವೈದ್ಯ ಶಾಬಾ ಷರೀಫ್ ಅವರ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಮೂವರಿಗೆ ಕೇರಳದ ಮಂಜೇರಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಿಭಿನ್ನ ಶಿಕ್ಷೆಗಳನ್ನು ನೀಡಿದೆ.ಪ್ರಮುಖ ಆರೋಪಿ ಶೈಬಿನ್ ಅಶ್ರಫ್‌ಗೆ (37) 13 ವರ್ಷ-9 ತಿಂಗಳ ಕಠಿಣ ಜೈಲು ಶಿಕ್ಷೆ ಮತ್ತು ₹2.44 ಲಕ್ಷ ದಂಡ ವಿಧಿಸಲಾಗಿದೆ. ಎರಡನೇ ಆರೋಪಿ ಶಿಹಾಬುದ್ದೀನ್‌ಗೆ (36) 8.9 ವರ್ಷ ಜೈಲು ಶಿಕ್ಷೆ ಮತ್ತು ₹60,000 ದಂಡ ವಿಧಿಸಲಾಗಿದೆ. ಆರನೇ ಆರೋಪಿ ನಿಶಾದ್ ನಡುತೋಡಿಕಗೆ (32) 5.9 ವರ್ಷದ ಜೈಲು ಶಿಕ್ಷೆ ಮತ್ತು ₹45,000 ದಂಡ ವಿಧಿಸಲಾಗಿದೆ.
ಕೊಲೆಗೆ ಕಾರಣವೇನು?:ಬಾಬಾ ಷರೀಫ್ ಬಳಿ ಮೂಲವ್ಯಾಧಿ ಗುಣಪಡಿಸುವ ಔಷಧ ಸೂತ್ರ ಇತ್ತು. ಇದನ್ನು ಪಡೆಯಲು ಅಶ್ರಫ್ ಯತ್ನಿಸಿದ್ದ. ಈ ಸೂತ್ರ ಪಡೆದು ತಾನೇ ಔಷಧ ತಯಾರಿಸಿ ದೊಡ್ಡ ಕ್ಲಿನಿಕ್ ಸ್ಥಾಪನೆ ಮಾಡುವ ಉದ್ದೇಶ ಅಶ್ರಫ್‌ಗೆ ಇತ್ತು. ಆದರೆ ಈ ಸೂತ್ರವನ್ನು ಷರೀಫ್ ನೀಡಲು ಒಪ್ಪಿರಲಿಲ್ಲ. ಹೀಗಾಗೇ ಷರೀಫ್‌ನನ್ನು ತನ್ನ ಸಹಚರರ ಮೂಲಕ ಅಶ್ರಫ್ ಅಪಹರಿಸಿ ಚಿತ್ರ ಹಿಂಸೆ ಮಾಡಿಸಿ ಕೊಲೆ ಮಾಡಿಸಿದ್ದ ಹಾಗೂ ಆವರ ದೇಹವನ್ನು ತುಂಡು ಮಾಡಿ, ಅವಶೇಷಗಳನ್ನು ಚಾಲಿಯಾರ್ ನದಿಗೆ ಎಸೆದಿದ್ದ ಎಂದು ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ಹೇಳಿದ್ದರು.