ಯೂಸುಫ್‌ ಔಟ್‌, ಅಭಿಷೇಕ್‌ ಇನ್‌

| Published : May 21 2025, 02:02 AM IST

ಸಾರಾಂಶ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಗ್ರಪೋಷಕ ಪಾಕಿಸ್ತಾನದ ಬಣ್ಣ ಬಯಲು ಮಾಡಲು ವಿದೇಶಕ್ಕೆ ತೆರಳುತ್ತಿರುವ ಸರ್ವಪಕ್ಷಗಳ 7 ನಿಯೋಗಗಳಲ್ಲಿ ಟಿಎಂಸಿ ಪ್ರತಿನಿಧಿಯಾಗಿ ಸಂಸದ ಯೂಸುಫ್‌ ಪಠಾಣ್‌ ಬದಲು ಮಮತಾ ಬ್ಯಾನರ್ಜಿ ಬಂಧುವಾದ ಇನ್ನೊಬ್ಬ ಸಂಸದ ಅಭಿಷೇಕ ಬ್ಯಾನರ್ಜಿ ಅವರನ್ನು ಪಕ್ಷ ಕಳಿಸಿಕೊಡಲು ನಿರ್ಧರಿಸಿದೆ.

- ಪಾಕ್‌ ವಿರುದ್ಧದ ನಿಯೋಗಕ್ಕೆ ಟಿಎಂಸಿಯಿಂದ ಹೊಸ ಆಯ್ಕೆ

- ದೀದಿ ಸೂಚನೆ ಮೇರೆಗೆ ಅಭಿಷೇಕ್‌ ಬ್ಯಾನರ್ಜಿ ನೇಮಕ

- ಹೊರಬಂದಿದ್ದ ಯೂಸುಫ್ ಪಠಾಣ್ ಜಾಗಕ್ಕೆ ಅಭಿ ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಗ್ರಪೋಷಕ ಪಾಕಿಸ್ತಾನದ ಬಣ್ಣ ಬಯಲು ಮಾಡಲು ವಿದೇಶಕ್ಕೆ ತೆರಳುತ್ತಿರುವ ಸರ್ವಪಕ್ಷಗಳ 7 ನಿಯೋಗಗಳಲ್ಲಿ ಟಿಎಂಸಿ ಪ್ರತಿನಿಧಿಯಾಗಿ ಸಂಸದ ಯೂಸುಫ್‌ ಪಠಾಣ್‌ ಬದಲು ಮಮತಾ ಬ್ಯಾನರ್ಜಿ ಬಂಧುವಾದ ಇನ್ನೊಬ್ಬ ಸಂಸದ ಅಭಿಷೇಕ ಬ್ಯಾನರ್ಜಿ ಅವರನ್ನು ಪಕ್ಷ ಕಳಿಸಿಕೊಡಲು ನಿರ್ಧರಿಸಿದೆ.

ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕರೆ ಮಾಡಿ, ಅವರ ಸಲಹೆ ಪಡೆದ ನಂತರ ಬ್ಯಾನರ್ಜಿ ಆಯ್ಕೆ ಅಂತಿಮವಾಗಿದೆ ಎಂದು ತಿಳಿದುಬಂದಿದೆ. ಈ ಮೊದಲು ಕೇಂದ್ರ ಸರ್ಕಾರ ಸಂಸದ ಯೂಸುಫ್ ಪಠಾಣ್ ಅವರನ್ನು ನಿಯೋಗಕ್ಕೆ ಆಯ್ಕೆ ಮಾಡಿತ್ತು. ಆದರೆ ನಿಯೋಗದ ಭಾಗವಾಗಲು ಪಠಾಣ್‌ಗೆ ಪಕ್ಷದಿಂದ ಯಾವುದೇ ಸೂಚನೆ ಇರಲಿಲ್ಲ. ಆದರೂ ಕೇಂದ್ರ ಅವರನ್ನು ಆಯ್ಕೆ ಮಾಡಿದ್ದು ಮಮತಾ ಬ್ಯಾನರ್ಜಿ ಅಸಮಾಧಾನಕ್ಕೆ ಕಾರಣವಾಗಿತ್ತು. ಅದರ ಬೆನ್ನಲ್ಲೆ, ಪಠಾಣ್ ನಿಯೋಗದಿಂದ ಹೊರಬರಲು ನಿರ್ಧರಿಸಿದ್ದರು. ಇದೀಗ ಅವರ ಬದಲಿಗೆ ಅಭಿಷೇಕ್ ಬ್ಯಾನರ್ಜಿ ತೆರಳಲಿದ್ದಾರೆ.