ಸಾರಾಂಶ
ನಟಿ ಆಲಿಯಾ ಭಟ್‌ಗೆ ₹76 ಲಕ್ಷ ರು. ವಂಚಿಸಿದ ಪ್ರಕರಣದಲ್ಲಿ ಮಂಗಳೂರು ಮೂಲದ ಅವರ ಮಾಜಿ ಆಪ್ತ ಸಹಾಯಕಿ ವೇದಿಕಾ ಶೆಟ್ಟಿಯನ್ನು ಬೆಂಗಳೂರಿನಲ್ಲಿ ಮುಂಬೈನ ಜುಹು ಪೊಲೀಸರು ಬುಧವಾರ ಬಂಧಿಸಿದ್ದಾರೆ. ದೂರು ದಾಖಲಾದ ಬಳಿಕ ಪರಾರಿಯಾಗಿದ್ದ ಆಕೆಯನ್ನು ಐದು ತಿಂಗಳ ಬಳಿಕ ಬಂಧಿಸಲಾಗಿದೆ.
76 ಲಕ್ಷ ರು. ವಂಚನೆ ಕೇಸಲ್ಲಿ ಬೆಂಗಳೂರಲ್ಲಿ ಸೆರೆ
ಮುಂಬೈ: ನಟಿ ಆಲಿಯಾ ಭಟ್‌ಗೆ ₹76 ಲಕ್ಷ ರು. ವಂಚಿಸಿದ ಪ್ರಕರಣದಲ್ಲಿ ಮಂಗಳೂರು ಮೂಲದ ಅವರ ಮಾಜಿ ಆಪ್ತ ಸಹಾಯಕಿ ವೇದಿಕಾ ಶೆಟ್ಟಿಯನ್ನು ಬೆಂಗಳೂರಿನಲ್ಲಿ ಮುಂಬೈನ ಜುಹು ಪೊಲೀಸರು ಬುಧವಾರ ಬಂಧಿಸಿದ್ದಾರೆ. ದೂರು ದಾಖಲಾದ ಬಳಿಕ ಪರಾರಿಯಾಗಿದ್ದ ಆಕೆಯನ್ನು ಐದು ತಿಂಗಳ ಬಳಿಕ ಬಂಧಿಸಲಾಗಿದೆ.2022 ರಿಂದ 2024ರ ಅವಧಿಯಲ್ಲಿ ನಡೆದಿರುವ ವಂಚನೆ ಪ್ರಕರಣ ಇದು ಎನ್ನಲಾಗಿದ್ದು, ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ ಪ್ರೈ.ಲಿ ನಿರ್ದೇಶಕರಾಗಿರುವ ಆಲಿಯಾ ತಾಯಿ ಸೋನಿ ರಾಜ್ದಾನ್ ವಂಚನೆಗೆ ಸಂಬಂಧ ಮುಂಬೈನಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ, 2021-24ರವರೆಗೆ ಆಲಿಯಾಗೆ ಆಪ್ತ ಸಹಾಯಕಿಯಾಗಿದ್ದ ವೇದಿಕಾ, ನಕಲಿ ಬಿಲ್ ಸೃಷ್ಟಿಸಿ, ನಟಿಯ ಸಹಿ ಪಡೆದು ಬರೋಬ್ಬರಿ 76 ಲಕ್ಷ ರು. ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಅವರ ವಿರುದ್ಧ ಜ.23 ರಂದು ಪ್ರಕರಣ ದಾಖಲಾಗಿತ್ತು. ಆ ಬಳಿಕ ಬಂಧನ ಭೀತಿಯಿಂದ ಪರಾರಿಯಾಗಿದ್ದರು. ಪದೇ ಪದೇ ತಮ್ಮ ಸ್ಥಳವನ್ನು ಬದಲಿಸುತ್ತಿದ್ದರು. ರಾಜಸ್ಥಾನ, ಕರ್ನಾಟಕ, ಪುಣೆಗೆ ಸ್ಥಳ ಬದಲಿಸುತ್ತಿದ್ದ ಆಕೆಯನ್ನು ಪೊಲೀಸರು ಕೊನೆಗೂ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬಳಿಕ ಟ್ರಾನ್ಸಿಟ್ ರಿಮಾಂಡ್‌ನಲ್ಲಿ ಮುಂಬೈಗೆ ಕರೆದೊಯ್ಯದ್ದಿದ್ದಾರೆ.