ಸಾರಾಂಶ
ಮಾರುಕಟ್ಟೆ ದರಕ್ಕಿಂತ ಕಡಿಮೆ ದರಕ್ಕೆ ಪೆಟ್ರೋಲ್, ಡೀಸೆಲ್ ಮಾರಾಟ ಮಾಡಿದ್ದಕ್ಕೆ ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳಿಗೆ ಬಂಡವಾಳದ ರೂಪದಲ್ಲಿ 30000 ಕೋಟಿ ರು. ನೆರವು ನೀಡುವ ಪ್ರಸ್ತಾಪವನ್ನು ಕೈಬಿಟ್ಟಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ನವದೆಹಲಿ: ಮಾರುಕಟ್ಟೆ ದರಕ್ಕಿಂತ ಕಡಿಮೆ ದರಕ್ಕೆ ಪೆಟ್ರೋಲ್, ಡೀಸೆಲ್ ಮಾರಾಟ ಮಾಡಿದ್ದಕ್ಕೆ ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳಿಗೆ ಬಂಡವಾಳದ ರೂಪದಲ್ಲಿ 30000 ಕೋಟಿ ರು. ನೆರವು ನೀಡುವ ಪ್ರಸ್ತಾಪವನ್ನು ಕೈಬಿಟ್ಟಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಕಳೆದ ಕೆಲ ತಿಂಗಳಿನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾದರೂ, ತೈಲ ಕಂಪನಿಗಳು ದರ ಇಳಿಸಿರಲಿಲ್ಲ. ಹೀಗಾಗಿ ಅವುಗಳಿಗೆ ಭರ್ಜರಿ ಲಾಭವಾಗಿ, ಬೊಕ್ಕಸ ಭರ್ಜರಿಯಾಗಿ ತುಂಬಿ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಹೀಗಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಇನ್ನೊಂದೆಡ ಮಂಗಳೂರು, ವಿಶಾಖಪಟ್ಟಣದಲ್ಲಿರುವ ಭೂಗತ ತೈಲ ಸಂಗ್ರಹಾರಾಗಳಲ್ಲಿ ಹೆಚ್ಚಿನ ಪ್ರಮಾಣದ ತೈಲ ಸಂಗ್ರಹಿಸಲು, ಅಗತ್ಯ ತೈಲ ಖರೀದಿಗೆ 5000 ಕೋಟಿ ರು. ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.