ಸಿಬಿಎಸ್ಇ ಬಳಿಕ ಐಸಿಎಸ್‌ಇ ಫಲಿತಾಂಶದಲ್ಲಿ ಮೆರಿಟ್ ಪಟ್ಟಿ ಸ್ಥಗಿತ

| Published : May 07 2024, 01:06 AM IST / Updated: May 07 2024, 06:16 AM IST

ಸಿಬಿಎಸ್ಇ ಬಳಿಕ ಐಸಿಎಸ್‌ಇ ಫಲಿತಾಂಶದಲ್ಲಿ ಮೆರಿಟ್ ಪಟ್ಟಿ ಸ್ಥಗಿತ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವರ್ಷದಿಂದ ಸಿಬಿಎಸ್ಇ ಬೋರ್ಡ್ 10 ಮತ್ತು 12 ತರಗತಿ ವಿದ್ಯಾರ್ಥಿಗಳಿಗೆ ಮೆರಿಟ್ ಆಧಾರದಲ್ಲಿ ಫಲಿತಾಂಶ ಪ್ರಕಟಿಸುವ ಪದ್ಧತಿಯನ್ನು ನಿಲ್ಲಿಸಿತ್ತು. ಇದೀಗ ಐಸಿಎಸ್‌ಇ ಬೋರ್ಡ್ ಕೂಡ ಅದೇ ನಿರ್ಧಾರವನ್ನು ಕೈಗೊಂಡಿದೆ.

ನವದೆಹಲಿ: ಕಳೆದ ವರ್ಷದಿಂದ ಸಿಬಿಎಸ್ಇ ಬೋರ್ಡ್ 10 ಮತ್ತು 12 ತರಗತಿ ವಿದ್ಯಾರ್ಥಿಗಳಿಗೆ ಮೆರಿಟ್ ಆಧಾರದಲ್ಲಿ ಫಲಿತಾಂಶ ಪ್ರಕಟಿಸುವ ಪದ್ಧತಿಯನ್ನು ನಿಲ್ಲಿಸಿತ್ತು. ಇದೀಗ ಐಸಿಎಸ್‌ಇ ಬೋರ್ಡ್ ಕೂಡ ಅದೇ ನಿರ್ಧಾರವನ್ನು ಕೈಗೊಂಡಿದೆ.

‘ವಿದ್ಯಾರ್ಥಿಗಳಲ್ಲಿ ಅನಾರೋಗ್ಯಕರ ಸ್ಪರ್ಧೆ ತಪ್ಪಿಸುವ ಸಲುವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ’ ಎಂದು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೆಟ್ ಎಕ್ಸಾಮಿನೇಷನ್ ( ಸಿಐಎಸ್‌ಸಿಇ) ಬೋರ್ಡ್ ನ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಜೋಸೆಫ್ ಇಮ್ಯಾನುವೆಲ್ ಸ್ಪಷ್ಟ ಪಡಿಸಿದ್ದಾರೆ .

ಸೋಮವಾರ ಐಸಿಎಸ್‌ಇ ನ 10 ಮತ್ತು 12 ನೇ ತರಗತಿ ಫಲಿತಾಂಶ ಹೊರಬಿದ್ದಿದ್ದು, ಮೆರಿಟ್ ಪದ್ಧತಿಯಲ್ಲಿ ಈ ಬಾರಿ ಫಲಿತಾಂಶ ಪ್ರಕಟಿಸಿಲ್ಲ. ಇನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಫಲಿತಾಂಶ ಗಣನೀಯ ಏರಿಕೆಯಾಗಿದೆ.