ಬಂಗಾಳ: ರಾಷ್ಟ್ರಪತಿ ಆಳ್ವಿಕೆಗೆ ಮಹಿಳಾ ಆಯೋಗ ಆಗ್ರಹ

| Published : Feb 20 2024, 01:47 AM IST / Updated: Feb 20 2024, 08:11 AM IST

ಸಾರಾಂಶ

ಪಶ್ಚಿಮ ಬಂಗಾಳದಲ್ಲಿನ ಸಂದೇಶ್‌ಖಾಲಿ ಘಟನೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗ ಆಗ್ರಹಿಸಿದೆ.

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿನ ಸಂದೇಶ್‌ಖಾಲಿ ಘಟನೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗ ಆಗ್ರಹಿಸಿದೆ.

ಈ ಕುರಿತು ಮಾತನಾಡಿರುವ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ,‘ನಾವು ಸಂದೇಶ್‌ಖಾಲಿಗೆ ತೆರಳಿ ಅಲ್ಲಿನ ಮಹಿಳೆಯರ ಜೊತೆ ಸಂವಾದ ನಡೆಸಿದೆವು. ಅಲ್ಲಿನ ಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಮಹಿಳೆಯರು ಟಿಎಂಸಿ ಕಚೇರಿಯಲ್ಲಿ ತಮಗೆ ಅತ್ಯಾಚಾರವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ನಾವು ಆಗ್ರಹಿಸುತ್ತೇವೆ. ಜೊತೆಗೆ ಇದನ್ನೇ ನಮ್ಮ ವರದಿಯಲ್ಲೂ ತಿಳಿಸುತ್ತೇವೆ ಎಂದರು.