ಟೆಕ್ ದೈತ್ಯ ಗೂಗಲ್ ತನ್ನ ಬಳಕೆದಾರಿಗೆ ಅನುಕೂಲವಾಗುವಂತಹ ಬದಲಾವಣೆಯೊಂದನ್ನು ಪರಿಚಯಿಸಿದೆ. ಇದರನ್ವಯ, ಇನ್ನು @gmail.com ಎಂದಿರುವ ಇಮೇಲ್ ವಿಳಾಸವನ್ನು, ಸುಲಭವಾಗಿ ಬದಲಿಸಬಹುದಾಗಿದೆ. ಈ ಬದಲಾವಣೆಯಿಂದ, ಹಳೆ ಅಡ್ರೆಸ್‌ನಲ್ಲಿ ಸೇವ್ ಆಗಿರುವ ಯಾವುದೇ ಡೇಟಾ ನಷ್ಟವಾಗುವುದಿಲ್ಲ.
ನವದೆಹಲಿ: ಟೆಕ್ ದೈತ್ಯ ಗೂಗಲ್ ತನ್ನ ಬಳಕೆದಾರಿಗೆ ಅನುಕೂಲವಾಗುವಂತಹ ಬದಲಾವಣೆಯೊಂದನ್ನು ಪರಿಚಯಿಸಿದೆ. ಇದರನ್ವಯ, ಇನ್ನು @gmail.com ಎಂದಿರುವ ಇಮೇಲ್ ವಿಳಾಸವನ್ನು, ಸುಲಭವಾಗಿ ಬದಲಿಸಬಹುದಾಗಿದೆ. ಈ ಬದಲಾವಣೆಯಿಂದ, ಹಳೆ ಅಡ್ರೆಸ್‌ನಲ್ಲಿ ಸೇವ್ ಆಗಿರುವ ಯಾವುದೇ ಡೇಟಾ ನಷ್ಟವಾಗುವುದಿಲ್ಲ.
ಈ ಬಗ್ಗೆ ಗೂಗಲ್ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ.
ಈ ಬಗ್ಗೆ ಗೂಗಲ್ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ. ಅದರ ಪ್ರಕಾರ, gmail.comನಿಂದ ಕೊನೆಗೊಳ್ಳುವ ಮೇಲ್ ವಿಳಾಸವನ್ನು, gmail.comನಿಂದ ಅಂತ್ಯವಾಗುವ ಇನ್ನೊಂದು ವಿಳಾಸಕ್ಕೆ ಬದಲಿಸಬಹುದು. ಅವುಗಳನ್ನು ಪರ್ಯಾಯವಾಗಿ ಬಳಸಬಹುದು. ಈ ಬದಲಾವಣೆ ವೇಳೆ, ಹಳೆ ವಿಳಾಸದಲ್ಲಿದ್ದ ಫೋಟೋ, ಸಂದೇಶ, ಇ-ಮೇಲ್ ಇತ್ಯಾದಿಗಳಿಗೆ ಯಾವುದೇ ಸಮಸ್ಯೆಯಾಗದು. ಅವು ಇದ್ದಹಾಗೆಯೇ ಇರಲಿವೆ. ಒಮ್ಮೆ ಜಿಮೇಲ್ ವಿಳಾಸ ಬದಲಿಸಿದರೆ, ನಂತರ 12 ತಿಂಗಳು(1 ವರ್ಷ) ಅದನ್ನು ಬದಲಿಸಲಾಗದು.
ಬದಲಿಸುವುದು ಹೇಗೆ?:
ಗೂಗಲ್‌ನ ಅಧಿಕೃತ ಸಪೋರ್ಟ್ ಪೇಜ್‌ನ ಭಾಷೆ ಬದಲಿಸುವಿಕೆ ಆಯ್ಕೆಯಲ್ಲಿ ಮೇಲ್ ವಿಳಾಸ ಬದಲಾವಣೆಯನ್ನು ಮಾಡಲು ಅವಕಾಶವಿದೆ. ಇದು ಹಲವು ಹಂತಗಳಲ್ಲಿ ಜಾರಿಗೆ ಬರುತ್ತಿರುವುದರಿಂದ, ಎಲ್ಲರಿಗೂ ಈಗಲೇ ಲಭ್ಯವಾಗಿರಲಿಕ್ಕಿಲ್ಲ. ಈ ಸೌಲಭ್ಯ ನಿಮಗೆ ಲಭ್ಯವಿದೆಯೇ ಎಂದು ನೋಡಲು ಗೂಗಲ್ ಅಕೌಂಟ್ ಸೆಟ್ಟಿಂಗ್ಸ್‌ನ ವೈಯಕ್ತಿಕ ಮಾಹಿತಿ(ಪರ್ಸನಲ್ ಇನ್ಫಾರ್ಮೇಷನ್) ವಿಭಾಗದಲ್ಲಿ ಪರಿಶೀಲಿಸಬಹುದು. ಒಂದೊಮ್ಮೆ ಲಭ್ಯವಿದ್ದಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಅಗತ್ಯ ಡೇಟಾದ ಬ್ಯಾಕ್-ಅಪ್ ಇಟ್ಟುಕೊಳ್ಳುವುದು ಸೂಕ್ತ.
