ಎಐ ತಂತ್ರಜ್ಞಾನವು ಉದ್ಯೋಗ ಕಸಿಯುವ ಭೀತಿ ಹೆಚ್ಚುತ್ತಿರುವ ನಡುವೆಯೇ, ಜಗತ್ತಿನ ಪ್ರಮುಖ ಟೆಕ್‌ ಕಂಪನಿಗಳ ಪೈಕಿ ಒಂದಾದ ಒರಾಕಲ್‌ ಭಾರತದ 12000 ಸೇರಿದಂತೆ ವಿಶ್ವಾದ್ಯಂತ ಇರುವ ತನ್ನ 30000 ಸಿಬ್ಬಂದಿಗಳನ್ನು ಒಂದೇ ಇ ಮೇಲ್‌ ಮೂಲಕ ಕೆಲಸದಿಂದ ತೆಗೆದು ಹಾಕಿದೆ. ಮಂಗಳವಾರ ಬೆಳಗ್ಗೆ 6 ಗಂಟೆಗೆ ಏಕಾಏಕಿ ಎಲ್ಲಾ ಸಿಬ್ಬಂದಿಗಳಿಗೆ ಕಂಪನಿ ಇಂಥದ್ದೊಂದು ಆಘಾತಕಾರಿ ಮಾಹಿತಿ ರವಾನಿಸಿದೆ

ನವದೆಹಲಿ: ಎಐ ತಂತ್ರಜ್ಞಾನವು ಉದ್ಯೋಗ ಕಸಿಯುವ ಭೀತಿ ಹೆಚ್ಚುತ್ತಿರುವ ನಡುವೆಯೇ, ಜಗತ್ತಿನ ಪ್ರಮುಖ ಟೆಕ್‌ ಕಂಪನಿಗಳ ಪೈಕಿ ಒಂದಾದ ಒರಾಕಲ್‌ ಭಾರತದ 12000 ಸೇರಿದಂತೆ ವಿಶ್ವಾದ್ಯಂತ ಇರುವ ತನ್ನ 30000 ಸಿಬ್ಬಂದಿಗಳನ್ನು ಒಂದೇ ಇ ಮೇಲ್‌ ಮೂಲಕ ಕೆಲಸದಿಂದ ತೆಗೆದು ಹಾಕಿದೆ. ಮಂಗಳವಾರ ಬೆಳಗ್ಗೆ 6 ಗಂಟೆಗೆ ಏಕಾಏಕಿ ಎಲ್ಲಾ ಸಿಬ್ಬಂದಿಗಳಿಗೆ ಕಂಪನಿ ಇಂಥದ್ದೊಂದು ಆಘಾತಕಾರಿ ಮಾಹಿತಿ ರವಾನಿಸಿದೆ. ಜೊತೆಗೆ ಕಂಪನಿ ಮುಂದಿನ ತಿಂಗಳು ಇನ್ನಷ್ಟು ಉದ್ಯೋಗಿಗಳನ್ನು ಕೂಡಾ ಕಿತ್ತುಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.

ಮುನ್ಸೂಚನೆಯೂ ಇಲ್ಲದೆ ಕೈಬಿಟ್ಟ ಒರಾಕಲ್‌

ಯಾವ ಮುನ್ಸೂಚನೆಯೂ ಇಲ್ಲದೆ, ‘ಒರ್‍ಯಾಕಲ್‌ನ ಪ್ರಸ್ತುತ ವ್ಯವಹಾರ ಅಗತ್ಯಗಳನ್ನು ಎಚ್ಚರಿಕೆಯಿಂದ ಪರಿಗಣಿಸಿದ ನಂತರ, ನಿಮ್ಮ ಉದ್ಯೋಗವನ್ನು ತೆಗೆದುಹಾಕಲು ನಿರ್ಧರಿಸಿದ್ದೇವೆ. ಪರಿಣಾಮವಾಗಿ, ಇಂದು ನಿಮ್ಮ ಕೊನೆಯ ಕೆಲಸದ ದಿನವಾಗಿದೆ. ನಿಮ್ಮ ಕಂಪ್ಯೂಟರ್, ಇಮೇಲ್ ಮತ್ತು ಫೈಲ್‌ಗಳಿಗೆ ಪ್ರವೇಶವನ್ನು ಶೀಘ್ರದಲ್ಲೇ ನಿಷ್ಕ್ರಿಯಗೊಳಿಸಲಾಗುತ್ತದೆ. ನಂತರ ಕಂಪ್ಯೂಟರ್‌ಗೆ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ’ ಎಂದು ಬೆಳ್ಳಂಬೆಳಿಗ್ಗೆ ಇಮೇಲ್‌ ಕಳುಹಿಸಿ ಉದ್ಯೋಗಿಗಳನ್ನು ಆಘಾತಕ್ಕೆ ದೂಡಿದೆ.

 ವರ್ಷಕ್ಕಿಂತ ಹೆಚ್ಚು ಕಾಲ ಕೆಲಸ ಮಾಡಿದ ಉದ್ಯೋಗಿಗಳಿಗೆ 15 ದಿನಗಳ ಸಂಬಳ

ಒಂದು ವರ್ಷಕ್ಕಿಂತ ಹೆಚ್ಚು ಕಾಲ ಕೆಲಸ ಮಾಡಿದ ಉದ್ಯೋಗಿಗಳಿಗೆ 15 ದಿನಗಳ ಸಂಬಳ, ಒಂದು ತಿಂಗಳು ನೋಟೀಸ್‌ ಅವಧಿಯ ಸಂಬಳ, ಗ್ರಾಚ್ಯುಟಿ ಹಾಗೂ ಇತರ ಸೌಲಭ್ಯಗಳನ್ನು ನೀಡುವುದಾಗಿ ತಿಳಿಸಿದೆ.

ಭಾರತದಲ್ಲಿ ಕಂಪನಿ ಸುಮಾರು 30,000 ಉದ್ಯೋಗಿಗಳನ್ನು ಹೊಂದಿದೆ. ಇವರಲ್ಲಿ 12,000 ಮಂದಿಯನ್ನು ಈಗಾಗಲೇ ವಜಾಗೊಳಿಸಿದ್ದು, ಇದೇ ತಿಂಗಳು ಇನ್ನೂ ಹಲವರನ್ನು ವಜಾ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.