ಜಿ7: ಇಟಲಿಗೆ ಪ್ರಧಾನಿ ಮೋದಿ ಆಗಮನ

| Published : Jun 14 2024, 01:00 AM IST / Updated: Jun 14 2024, 05:36 AM IST

ಸಾರಾಂಶ

ಜಿ7 ದೇಶಗಳ ಶೃಂಗಸಭೆಯಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಇಟಲಿಗೆ ಆಗಮಿಸಿದರು.

ರೋಮ್‌: ಜಿ7 ದೇಶಗಳ ಶೃಂಗಸಭೆಯಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಇಟಲಿಗೆ ಆಗಮಿಸಿದರು. ಈ ವೇಳೆಗೆ ಅವರಿಗೆ ಆತ್ಮೀಯ ಸ್ವಾಗತ ಕೋರಲಾಯಿತು. ಇದು ಮೂರನೇ ಬಾರಿಗೆ ಪ್ರಧಾನಿಯಾದ ಬಳಿಕ ಮೋದಿ ಅವರ ಮೊದಲ ವಿದೇಶಿ ಪ್ರವಾಸವಾಗಿದೆ.

2 ದಿನಗಳ ಶೃಂಗದ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರಾನ್‌, ಕೆನಡಾ ಪ್ರಧಾನಿ ಟ್ರುಡೋ, ಜಪಾನ್‌ ಪ್ರಧಾನಿ ಕಿಶಿದಾ ಮತ್ತು ಜರ್ಮನಿ ಒಲಾಫ್‌ ಸ್ಕ್ಲೋಲ್ಜ್‌ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ. ಭಾರತ ಜಿ7ನ ಭಾಗವಾಗದೇ ಇದ್ದರೂ, ಜಾಗತಿಕ ಮಟ್ಟದಲ್ಲಿ ಭಾರತದ ಪಾತ್ರವನ್ನು ಗಮನಿಸಿ ಇಟಲಿ ಪ್ರದಾನಿ ಮೆಲೋನಿ, ಪ್ರಧಾನಿ ಮೋದಿಗೆ ವಿಶೇಷ ಆಹ್ವಾನ ನೀಡಿದ್ದಾರೆ.

ಈ ಬಾರಿ ಶೃಂಗ ಸಭೆ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌, ಇಂಧನ, ಮಧ್ಯಪ್ರಾಚ್ಯ ಬಿಕ್ಕಟ್ಟು, ರಷ್ಯಾ- ಉಕ್ರೇನ್‌ ಯುದ್ಧ, ಇಸ್ರೇಲ್‌- ಪ್ಯಾಲೆಸ್ತೀನ್‌ ಯುದ್ಧ ಮತ್ತು ಆಫ್ರಿಕಾ ವಿಷಯಗಳ ಕುರಿತು ಪ್ರಮುಖವಾಗಿ ಚರ್ಚಿಸಲಿದೆ.