ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸಬೇಕಿದ್ದ ವೃದ್ಧೆಗೆ ಗಾಲಿಕುರ್ಚಿ ನೀಡದ ಏರ್‌ ಇಂಡಿಯಾ: ವಿವಾದ

| N/A | Published : Mar 09 2025, 01:46 AM IST / Updated: Mar 09 2025, 04:39 AM IST

ಸಾರಾಂಶ

ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸಬೇಕಿದ್ದ ವೃದ್ಧೆಗೆ ವಿಮಾನ ನಿಲ್ದಾಣದಲ್ಲಿ ವ್ಹೀಲ್‌ ಚೇರ್‌ ನೀಡಲು ಏರಿಂಡಿಯಾ ಸಿಬ್ಬಂದಿ 1 ತಾಸು ವಿಳಂಬ ಮಾಡಿದ ಕಾರಣ, ಆಕೆ ಎದ್ದು ನಡೆಯಲು ಮುಂದಾಗಿದ್ದರು ಹಾಗೂ ಕೆಳಗೆ ಬಿದ್ದು ಗಾಯಗೊಂಡರು ಎಂದು ಕಟುಂಬಸ್ಥರು ಆರೋಪಿಸಿದ್ದಾರೆ.

ನವದೆಹಲಿ: ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸಬೇಕಿದ್ದ ವೃದ್ಧೆಗೆ ವಿಮಾನ ನಿಲ್ದಾಣದಲ್ಲಿ ವ್ಹೀಲ್‌ ಚೇರ್‌ ನೀಡಲು ಏರಿಂಡಿಯಾ ಸಿಬ್ಬಂದಿ 1 ತಾಸು ವಿಳಂಬ ಮಾಡಿದ ಕಾರಣ, ಆಕೆ ಎದ್ದು ನಡೆಯಲು ಮುಂದಾಗಿದ್ದರು ಹಾಗೂ ಕೆಳಗೆ ಬಿದ್ದು ಗಾಯಗೊಂಡರು ಎಂದು ಕಟುಂಬಸ್ಥರು ಆರೋಪಿಸಿದ್ದಾರೆ. ಆದರೆ ಏರಿಂಡಿಯಾ ಆರೋಪ ನಿರಾಕರಿಸಿದ್ದು, ‘ಗಾಲಿ ಕುರ್ಚಿಗೆ ಹೆಚ್ಚು ಬೇಡಿಕೆ ಇದ್ದ ಕಾರಣ ವಿಳಂಬ ಆಗಿದೆ. 

ಆದರೆ ತಡ ಆಗಿದ್ದು 15 ನಿಮಿಷ ಮಾತ್ರ; 1 ಗಂಟೆ ಅಲ್ಲ’ ಎಂದಿದೆ. ‘ಮಾ.4ರಂದು ಘಟನೆ ನಡೆದಿದೆ. ನಡೆದಿದೆ. ಲೆಫ್ಟಿನೆಂಟ್‌ ಜನರಲ್ ಪತ್ನಿಯಾಗಿರುವ 82 ವರ್ಷದ ವೃದ್ಧೆ ಮುಂಗಡ ಬುಕ್ಕಿಂಗ್ ಮಾಡಿದರೂ ಏರಿಂಡಿಯಾ ಸಿಬ್ಬಂದಿ 1 ತಾಸು ವೀಲ್ಹ್‌ ಚೇರ್‌ ನೀಡಲಿಲ್ಲ. ವಿಳಂಬಕ್ಕೆ ಬೇಸತ್ತ ವೃದ್ಧೆ ನಡೆಯಲು ಹೋದಾಗ ಕೆಳಕ್ಕೆ ಬಿದ್ದಿದ್ದಾರೆ ವೃದ್ಧೆ ತುಟಿ ಮತ್ತು ತಲೆಗೆ ಗಾಯವಾಗಿದೆ. ಆಗ ವಿಮಾನ ನಿಲ್ದಾಣದಲ್ಲಿ ಪ್ರಥಮ ಚಿಕಿತ್ಸೆಯೂ ನೀಡಲಿಲ್ಲ’ ಎಂದು ವೃದ್ಧೆ ಮೊಮ್ಮಗಳು ಪರೌಲ್ ಕನ್ವರ್‌ ನಾಗರಿಕ ವಿಮಾನಯಾನ ನಿರ್ದೇಶಾನಲಯ ಮತ್ತು ಏರಿಂಡಿಯಾಗೆ ದೂರು ನೀಡಿದ್ದಾರೆ.

ಸದ್ಯ ವೃದ್ಧೆ, ಮೆದುಳು ರಕ್ತಸ್ರಾವ ಸಮಸ್ಯೆಯಿಂದ ಐಸಿಯುಗೆ ದಾಖಲಾಗಿದ್ದಾರೆ.

ಆರೋಪ ನಿರಾಕರಿಸಿದ ಏರಿಂಡಿಯಾ:

ಏರಿಂಡಿಯಾ ಅರೋಪ ನಿರಾಕರಿಸಿದ್ದು, ಹೆಚ್ಚಿನ ಬೇಡಿಕೆಯಿದ್ದ ಕಾರಣ 15 ನಿಮಿಷಗಳ ಒಳಗೆ ವೀಲ್ಹ್‌ಚೇರ್‌ ಒದಗಿಸಲು ಸಾಧ್ಯವಾಗಲಿಲ್ಲ. ಆದರೆ 1 ಗಂಟೆ ಕಾದರು ಎನ್ನುವ ಆರೋಪ ಆಧಾರರಹಿತ ಎಂದಿದೆ.