ಸ್ವದೇಶಿ ಕಂಪನಿ ಏರ್‌ಟೆಲ್‌ನಿಂದ ಉಪಗ್ರಹ ಆಧಾರಿತ ಇಂಟರ್ನೆಟ್‌? ರಂಜನ್‌ ಮಿತ್ತಲ್‌ ಮಾಹಿತಿ

| Published : Jan 24 2025, 12:50 AM IST / Updated: Jan 24 2025, 04:33 AM IST

ಸ್ವದೇಶಿ ಕಂಪನಿ ಏರ್‌ಟೆಲ್‌ನಿಂದ ಉಪಗ್ರಹ ಆಧಾರಿತ ಇಂಟರ್ನೆಟ್‌? ರಂಜನ್‌ ಮಿತ್ತಲ್‌ ಮಾಹಿತಿ
Share this Article
  • FB
  • TW
  • Linkdin
  • Email

ಸಾರಾಂಶ

  ಟೆಕ್‌ ಲೋಕದಲ್ಲಿ ಕ್ರಾಂತಿಕಾರಿ ಪ್ರಯೋಗಗಳನ್ನು ಮಾಡಿರುವ ಎಲಾನ್‌ ಮಸ್ಕ್‌ ಅವರ ಉಪಗ್ರಹದ ಮೂಲಕ ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸುವ ‘ಸ್ಟಾರ್‌ಲಿಂಕ್‌ ಯೋಜನೆ’ ಭಾರತದಲ್ಲಿ ಕಾರ್ಯರೂಪಕ್ಕೆ ಬರುವ ಮೊದಲೇ, ಸ್ವದೇಶಿ ಕಂಪನಿ ಏರ್‌ಟೆಲ್‌ ಆ ಸಾಧನೆ ಮಾಡಲು ಸಜ್ಜಾಗಿದೆ ಎಂದು ವರದಿಗಳು ಹೇಳಿವೆ.

ನವದೆಹಲಿ: ಟೆಕ್‌ ಲೋಕದಲ್ಲಿ ಕ್ರಾಂತಿಕಾರಿ ಪ್ರಯೋಗಗಳನ್ನು ಮಾಡಿರುವ ಎಲಾನ್‌ ಮಸ್ಕ್‌ ಅವರ ಉಪಗ್ರಹದ ಮೂಲಕ ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸುವ ‘ಸ್ಟಾರ್‌ಲಿಂಕ್‌ ಯೋಜನೆ’ ಭಾರತದಲ್ಲಿ ಕಾರ್ಯರೂಪಕ್ಕೆ ಬರುವ ಮೊದಲೇ, ಸ್ವದೇಶಿ ಕಂಪನಿ ಏರ್‌ಟೆಲ್‌ ಆ ಸಾಧನೆ ಮಾಡಲು ಸಜ್ಜಾಗಿದೆ ಎಂದು ವರದಿಗಳು ಹೇಳಿವೆ.

ಏರ್‌ಟೆಲ್‌ನ ಮಾತೃಸಂಸ್ಥೆಯಾದ ಭಾರತಿ ಎಂಟರ್‌ಪ್ರೈಸಸ್‌ನ ಉಪಾಧ್ಯಕ್ಷ ರಂಜನ್‌ ಮಿತ್ತಲ್‌ ಸಂದರ್ಶನವೊಂದರಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ‘ಗುಜರಾತ್‌ ಹಾಗೂ ತಮಿಳುನಾಡಿನಲ್ಲಿರುವ ಕೇಂದ್ರಗಳಲ್ಲಿ ಇದಕ್ಕೆ ಸಂಬಂಧಿಸಿದ ಎಲ್ಲಾ ಕೆಲಸಗಳು ಮುಗಿದಿದ್ದು, ಕೇಂದ್ರ ಸರ್ಕಾರದಿಂದ ಅನುಮತಿ ಸಿಗುವುದಷ್ಟೇ ಬಾಕಿ ಇದೆ’ ಎಂದಿದ್ದಾರೆ.

ಈಗಾಗಲೇ 635 ಉಪಗ್ರಹಗಳನ್ನು ಉಡಾವಣೆ ಮಾಡಿರುವ ಏರ್‌ಟೆಲ್‌, ಗ್ರಾಮೀಣ ಪ್ರದೇಶಗಳಿಗೂ ಕೈಗೆಟಕುವ ದರದಲ್ಲಿ ಇಂಟರ್‌ನೆಟ್‌ ಸೇವೆ ಒದಗಿಸುವ ಗುರಿ ಹೊಂದಿದೆ ಎಂದು ಮಿತ್ತಲ್‌ ತಿಳಿಸಿದ್ದಾರೆ.

ಅತ್ತ ಭಾರತದಲ್ಲಿ ತನ್ನ ಸೇವೆಯನ್ನು ಆರಂಭಿಸಲು ಕೇಂದ್ರದ ಅನುಮತಿಗೆ ಕಾಯುತ್ತಿರುವ ಸ್ಟಾರ್‌ಲಿಂಕ್‌ಗೆ ಈ ಬೆಳವಣಿಗೆ ಸವಾಲಾಗಿ ಪರಿಣಮಿಸಲಿದೆ.

ವೆಲ್‌ಡನ್‌ ಏರ್‌ಟೆಲ್‌

ಏರ್‌ಟೆಲ್‌ ಒಳ್ಳೆಯ ಕೆಲಸ ಮಾಡುತ್ತಿದೆ. ಭಾರತದ ಟೆಕ್ ಕಂಪನಿಗಳು ವಿಶ್ವದ ಅತ್ಯುತ್ತಮ ಕಂಪನಿಗಳಾಗುವ ಶಕ್ತಿ ಹೊಂದಿವೆ ಹಾಗೂ ಸ್ಪರ್ಧಿಸುವ ಸಾಮರ್ಥ್ಯ ಹೊಂದಿವೆ.

- ರಾಜೀವ್‌ ಚಂದ್ರಶೇಖರ್, ಮಾಜಿ ಕೇಂದ್ರ ಐಟಿ ಸಚಿವ