ಸಾರಾಂಶ
ಲೋಕಸಭಾ ಚುನಾವಣೆಯಲ್ಲಿ ಅಜಿತ್ ಪವಾರ್ ಬಣ ಕೇವಲ ಒಂದು ಸ್ಥಾನ ಗಳಿಸಿದ ಬೆನ್ನಲ್ಲೇ ಪಕ್ಷದ 40 ಶಾಸಕರ ಪೈಕಿ 10-15 ಶಾಸಕರು ಮರಳಿ ಶರದ್ ಪವಾರ್ ಬಣಕ್ಕೆ ಸೇರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಮುಂಬೈ: ಲೋಕಸಭಾ ಚುನಾವಣೆಯಲ್ಲಿ ಅಜಿತ್ ಪವಾರ್ ಬಣ ಕೇವಲ ಒಂದು ಸ್ಥಾನ ಗಳಿಸಿದ ಬೆನ್ನಲ್ಲೇ ಪಕ್ಷದ 40 ಶಾಸಕರ ಪೈಕಿ 10-15 ಶಾಸಕರು ಮರಳಿ ಶರದ್ ಪವಾರ್ ಬಣಕ್ಕೆ ಸೇರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ ವಿಧಾನಸಭೇ ಚುನಾವಣೆಗೆ ಇನ್ನು ಕೆಲವೇ ತಿಂಗಳಿರುವಾಗ ಮತ್ತೆ ರಾಜ್ಯದಲ್ಲಿ ರಾಜಕೀಯ ಸ್ಥಿತ್ಯಂತರಗಳು ಭುಗಿಲೇಳುವ ಸಾಧ್ಯತೆಯಿದೆ. ಅಜಿತ್ ಬಣದ 19 ಶಾಸಕರು ತಮ್ಮ ಜೊತೆ ಇರುವುದಾಗಿ ಶರದ್ ಬಣದ ರಾಜ್ಯಾಧ್ಯಕ್ಷ ಜಯಂತ್ ಪಾಟಿಲ್ ತಿಳಿಸಿದ ಬಳಿಕ ಈ ರೀತಿಯ ಊಹಾಪೋಹಗಳು ಪ್ರಾರಂಭವಾಗಿವೆ. ಅವರು ಜೂ.9-10ರಂದು ನಡೆಯುವ ಪಕ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸುಳ್ಳುಸುದ್ದಿ-ಅಜಿತ್ ಬಣ: ಅಜಿತ್ ಪವಾರ್ ಬಣದ ನಾಯಕ ಸುನಿಲ್ ತತ್ಕಾರೆ ಸ್ಪಷ್ಟನೆ ನೀಡಿದ್ದು, ‘ನಮ್ಮ ಬಣದ 10-15 ಶಾಸಕರು ಶರದ್ ಬಣ ಸೇರುತ್ತಾರೆ ಎಂಬುದು ಸುಳ್ಳುಸುದ್ದಿಯಾಗಿದ್ದು, ನಾವು 40 ಶಾಸಕರೂ ಒಗ್ಗಟ್ಟಾಗಿದ್ದೇವೆ’ ಎಂದು ತಿಳಿಸಿದ್ದಾರೆ.