ಹೈ ಸ್ಪೀಡ್‌ ಕಾರ್‌ ರೇಸ್‌ ವೇಳೆ 2 ಸಲ ಅಪಘಾತ : ತಮಿಳಿನ ಸೂಪರ್‌ ಸ್ಟಾರ್‌ ನಟ ಅಜಿತ್‌ ಪಾರು

| N/A | Published : Feb 24 2025, 12:31 AM IST / Updated: Feb 24 2025, 05:37 AM IST

ಸಾರಾಂಶ

 ತಮಿಳಿನ ಸೂಪರ್‌ ಸ್ಟಾರ್‌ ನಟ ಅಜಿತ್‌ ಕುಮಾರ್‌ ಅವರು ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಡೆದಿದ್ದ ಹೈ ಸ್ಪೀಡ್‌ ಕಾರ್‌ ರೇಸಿಂಗ್‌ ಪೋರ್ಷೆ ಸ್ಟ್ರಿಂಟ್‌ ಚಾಲೆಂಜ್‌ನಲ್ಲಿ ಪಾಲ್ಗೊಂಡಿದ್ದ ವೇಳೆ ಅವರ ಕಾರು ಎರಡು ಸಲ ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ.

ನವದೆಹಲಿ: ತಮಿಳಿನ ಸೂಪರ್‌ ಸ್ಟಾರ್‌ ನಟ ಅಜಿತ್‌ ಕುಮಾರ್‌ ಅವರು ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಡೆದಿದ್ದ ಹೈ ಸ್ಪೀಡ್‌ ಕಾರ್‌ ರೇಸಿಂಗ್‌ ಪೋರ್ಷೆ ಸ್ಟ್ರಿಂಟ್‌ ಚಾಲೆಂಜ್‌ನಲ್ಲಿ ಪಾಲ್ಗೊಂಡಿದ್ದ ವೇಳೆ ಅವರ ಕಾರು ಎರಡು ಸಲ ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ.ಈ ಬಗ್ಗೆ ಅಜಿತ್‌ ಮ್ಯಾನೇಜರ್‌ ಸುರೇಶ್‌ ಚಂದ್ರ ತಮ್ಮ ಎಕ್ಸ್‌ ಖಾತೆಯಲ್ಲಿ, ಅಪಘಾತದ ವಿಡಿಯೋದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

‘6ನೇ ಸುತ್ತು ದುರಾದೃಷ್ಟಕರವಾಗಿತ್ತು. ಇತರ ಕಾರುಗಳ ಜೊತೆ ಅಪಘಾತಕ್ಕೀಡಾಗಿತ್ತು. ಈ ವಿಡಿಯೋಗಳು ಸ್ಪಷ್ಟವಾಗಿ ಅವರ ತಪ್ಪಿಲ್ಲ ಎನ್ನುವುದನ್ನು ತೋರಿಸುತ್ತದೆ. ಮೊದಲ ಸಲ ಅಪಘಾತವಾದಾಗ ಅವರು ಪಿಟ್‌ಗೆ ಬಿದ್ದರು, ಚೆನ್ನಾಗಿದ್ದರು. ಎರಡನೇ ಸಲ ಅಪಘಾತವಾದಾಗ ಪಲ್ಟಿಯಾಗಿ ಕೆಳಗೆ ಬಿದ್ದರು. ಆದರೆ ಅಪಾಯವಿಲ್ಲದೆ ಮುನ್ನುಗಿದರು. ಅಜಿತ್‌ ಅವರ ಒಳಿತಿಗೆ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು. ಅವರು ಚೆನ್ನಾಗಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಕಳೆದ ತಿಂಗಳು ದುಬೈನಲ್ಲಿ ಕಾರ್ ರೇಸಿಂಗ್ ಅಭ್ಯಾಸದ ಸಂದರ್ಭದಲ್ಲಿ ನಟ ಅಜಿತ್‌ ಕಾರು ಅಪಘಾತಕ್ಕೀಡಾಗಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.