ಸಾರಾಂಶ
ಅಚ್ಚರಿಯ ವಿದ್ಯಮಾನವೊಂದರಲ್ಲಿ ಉತ್ತರ ಪ್ರದೇಶದ ಕನೌಜ್ ಲೋಕಸಭಾ ಕ್ಷೇತ್ರದಿಂದ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಸ್ಪರ್ಧೆ ಘೋಷಿಸಿದ್ದಾರೆ.
ಲಖನೌ: ಅಚ್ಚರಿಯ ವಿದ್ಯಮಾನವೊಂದರಲ್ಲಿ ಉತ್ತರ ಪ್ರದೇಶದ ಕನೌಜ್ ಲೋಕಸಭಾ ಕ್ಷೇತ್ರದಿಂದ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಸ್ಪರ್ಧೆ ಘೋಷಿಸಿದ್ದಾರೆ.
2 ದಿನದ ಹಿಂದೆ ಎಸ್‌ಪಿ ತೇಜ್ ಪ್ರತಾಪ್ ಯಾದವ್ ಅವರನ್ನು ಕನೌಜ್ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಈಗ ನಿರ್ಧಾರ ಬದಲಿಸಿ ಅಖಿಲೇಶ್ ಹೆಸರು ಘೋಷಿಸಲಾಘಿದೆ. ಅವರ ಚಿಕ್ಕಪ್ಪ ರಾಮ್‌ಗೋಪಾಲ್ ಯಾದವ್ ಅವರು, ‘ಅಖಿಲೇಶ್ ಯಾದವ್ ಗುರುವಾರ (ಏ.25) ನಾಮಪತ್ರ ಸಲ್ಲಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.
ಅಖಿಲೇಶ್ ಯಾದವ್ 2000, 2004 ಹಾಗೂ 2009 ರಲ್ಲಿ ಸಂಸದರಾಗಿ ಕನೌಜ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2012ರಲ್ಲಿ ಮುಖ್ಯಮಂತ್ರಿಯಾದಾಗ ಲೋಕಸಭಾ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಪತ್ನಿ ಡಿಂಪಲ್ ಯಾದವ್ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆದರೆ 2019 ರಲ್ಲಿ ಬಿಜೆಪಿಯ ಸುಬ್ರತ್ ಪಾಠಕ್ ವಿರುದ್ಧ ಡಿಂಪಲ್ ಸೋತಿದ್ದರು.
ಕನೌಜ್ ಕ್ಷೇತ್ರದಲ್ಲಿ ಮೇ13ರಂದು ಮತದಾನ ನಡೆಯಲಿದೆ.