ಲಿವ್‌ಇನ್‌ಗೂ ಮತಾಂತರ ಕಡ್ಡಾಯ: ಅಲಹಾಬಾದ್‌ ಹೈಕೋರ್ಟ್‌

| Published : Mar 15 2024, 01:20 AM IST

ಸಾರಾಂಶ

ಮದುವೆ ರೀತಿಯ ಎಲ್ಲ ಅಂಶಗಳಿಗೂ ಸಮಾನ ಕಾನೂನು ಅನ್ವಯವಾಗಲಿದ್ದು, ಲಿವ್‌ಇನ್‌ ಸಂಬಂಧವನ್ನು ಮಾನ್ಯ ಮಾಡುವುದಕ್ಕೂ ಇಬ್ಬರೂ ಒಂದೇ ಧರ್ಮದಲ್ಲಿರುವುದು ಉತ್ತರಪ್ರದೇಶದಲ್ಲಿ ಕಡ್ಡಾಯ ಎಂಬುದಾಗಿ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿದೆ.

ಪ್ರಯಾಗ್‌ರಾಜ್‌: ಲಿವ್‌ ಇನ್‌ಗೂ (ಮದುವೆ ಆಗದೇ ಪುರುಷ-ಮಹಿಳೆಯ ಸಹಜೀವನ) ಕಡ್ಡಾಯವಾಗಿ ಮತಾಂತರವಾಗಿರಬೇಕು ಎಂದು ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿದೆ.

ಉತ್ತರ ಪ್ರದೇಶ ಮತಾಂತರ ಕಾಯ್ದೆಯನ್ನು ಉಲ್ಲೇಖಿಸಿ ತೀರ್ಪು ನೀಡಿರುವ ಕೋರ್ಟ್‌, ‘ಕಾಯ್ದೆ ಅನ್ವಯ ಮತಾಂತರ ಎಂಬುದು ಕೇವಲ ಮದುವೆಗೆ ಮಾತ್ರ ಅನ್ವಯ ಆಗುವುದಿಲ್ಲ. ಮದುವೆ ರೀತಿಯಲ್ಲಿ ನಡೆಸುವ ಎಲ್ಲ ಸಂಬಂಧಗಳಿಗೂ ಮತಾಂತರ ಕಡ್ಡಾಯವಾಗಿದೆ’ ಎಂದಿದೆ.ಏನು ಪ್ರಕರಣ?ಅಂತರ್ಜಾತಿಯ ಜೋಡಿ ತಮಗೆ ರಕ್ಷಣೆ ಬೇಕೆಂದು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಪೈಕಿ ಒಬ್ಬರೂ ಸಹ ಮತಾಂತರಕ್ಕೆ ಅರ್ಜಿ ಸಲ್ಲಿಸಿರಲಿಲ್ಲ. ಮತಾಂತರಕ್ಕೆ ಅರ್ಜಿಸಲ್ಲಿಸದ ಕಾರಣ ಇವರನ್ನು ಕಾನೂನಾತ್ಮಕವಾಗಿ ಜೋಡಿ ಎನ್ನಲಾಗದು. ಹೀಗಾಗಿ ಇವರಿಗೆ ರಕ್ಷಣೆ ನೀಡಲು ಆಗದು ಎಂದು ಕೋರ್ಟ್‌ ಹೇಳಿದೆ.