ಸಾರಾಂಶ
ಹೈದರಾಬಾದ್: ಚಿತ್ರಮಂದಿರದಲ್ಲಿ ಕಾಲ್ತುಳಿತದಿಂದ ಮಹಿಳೆ ಸಾವು ಪ್ರಕರಣದಲ್ಲಿ ಷರತ್ತಿನ ಜಾಮೀನು ಪಡೆದಿರುವ ನಟ ಅಲ್ಲು ಅರ್ಜುನ್‌ಗೆ ವಿದೇಶ ಪ್ರವಾಸ ಸೇರಿ ಹಲವು ವಿನಾಯಿತಿಗಳನ್ನು ನಾಂಪಲ್ಲಿ ನಾಯಾಲಯ ಮಂಜೂರು ಮಾಡಿದೆ. .
ಪ್ರಕರಣ ಸಂಬಂಧ ಚಿಕ್ಕಡಪಲ್ಲಿ ಪೋಲಿಸ್ ಠಾಣೆಗೆ ಪ್ರತಿ ಭಾನುವಾರ ನಿಯಮಿತವಾಗಿ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ. ಅಲ್ಲದೆ, ವಿದೇಶ ಪ್ರವಾಸ ಕೈಗೊಳ್ಳಲೂ ಅನುಮತಿಸಿದೆ. ಇದರಿಂದ ನಟ ನಿರಾಳರಾಗಿದ್ಧಾರೆ
ಇಲ್ಲಿಯ ಚಿತ್ರಮಂದಿರದಲ್ಲಿ ನಟ ಅಲ್ಲು ಅರ್ಜುನ್ ಪುಷ್ಪ 2 ಸಿನಿಮಾ ವೀಕ್ಷಣೆಗೆ ಬಂದ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟಿದ್ದರು. ಘಟನೆಗೆ ಅಲ್ಲು ಕಾರಣ ಎಂದು ಆರೋಪಿಸಿ ಬಂಧಿಸಲಾಗಿತ್ತು. ಬಳಿಕ ಅವರಿಗೆ ಜಾಮೀನು ಲಭಿಸಿತ್ತು.
ಸ್ಪೇಡೆಕ್ಸ್ ನೌಕೆಗಳು ಈಗ ಮತ್ತಷ್ಟು ಹತ್ತಿರ: ಇಸ್ರೋ
ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಎಂದು ಪರಿಗಣಿಸಲಾಗಿರುವ ಡಾಕಿಂಗ್ ಪ್ರಕ್ರಿಯೆಯನ್ನು ಸಿದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಉಡಾವಣೆ ಮಾಡಿರುವ ಸ್ಪೇಡೆಕ್ಸ್ ನೌಕೆಗಳು ಇದೀಗ ಮತ್ತಷ್ಟು ಹತ್ತಿರ ಬಂದಿವೆ.‘ಪ್ರಸ್ತುತ 2 ನೌಕೆಗಳ ನಡುವೆ ಕೇವಲ 230 ಮೀ. ಅಂತರವಿದೆ. ಅವುಗಳ ಸ್ಥಿತಿ ಸಾಮಾನ್ಯವಾಗಿದ್ದು, ಎಲ್ಲಾ ಸೆನ್ಸಾರ್‌ಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಇಸ್ರೋ ಶನಿವಾರ ಮಾಹಿತಿ ನೀಡಿದೆ. ಆದರೆ ಡಾಕಿಂಗ್ ದಿನಾಂಕವನ್ನು ಅದು ಪ್ರಕಟಿಸಿಲ್ಲ.
1ನೇ ದಿನವೇ ₹186 ಕೋಟಿ ಬಾಚಿದ ರಾಮ್ ಚರಣ್ ‘ಗೇಮ್ ಚೇಂಜರ್’
ನವದೆಹಲಿ: ನಟ ರಾಮ್‌ಚರಣ್ ನಟನೆಯ ತೆಲುಗು ಚಲನಚಿತ್ರ ‘ಗೇಮ್ ಚೇಂಜರ್’ ವಿಶ್ವದಾದ್ಯಂತ ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ 186 ಕೋಟಿ ರು. ಬಾಚಿದೆ ಎಂದು ಚಿತ್ರದ ನಿರ್ಮಾಣ ಸಂಸ್ಥೆ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಹೇಳಿದೆ.ರಾಜಕೀಯ, ಸಾಹಸ ಪ್ರಧಾನ ಕಥಾವಸ್ತು ಹೊಂದಿರುವ ಈ ಚಿತ್ರ ಶುಕ್ರವಾರ ಬಿಡುಗಡೆಯಾಗಿತ್ತು. ಈ ಚಿತ್ರದ ಮೂಲಕ ತಮಿಳಿನ ‘ಇಂಡಿಯನ್’, ‘ಶಿವಾಜಿ’, ಮೊದಲಾದ ಚಿತ್ರಗಳ ಹೆಸರಾಂತ ನಿರ್ದೇಶಕ, ನಿರ್ಮಾಪಕ ಎಸ್.ಶಂಕರ್ ತೆಲುಗು ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದಾರೆ. ಕಿಯಾರಾ ಅಡ್ವಾಣಿ ನಾಯಕಿ ಹಾಗೂ ದಿಲ್ ರಾಜು ನಿರ್ಮಾಪಕರಾಗಿದ್ದಾರೆ.
ಅಸ್ಸಾಂ ಮಾಟಮಂತ್ರದ ಬಗ್ಗೆ ವಿವಾದಿತ ಹೇಳಿಕೆ: ಯೂಟ್ಯೂಬರ್ ಕ್ಷಮೆ
ಗುವಾಹಟಿ: ‘ಅಸ್ಸಾಂನ ಮಯೊಂಗ್ ಮಹಿಳೆಯರು ಮಾಟಮಂತ್ರದ ಮೂಲಕ ಮನುಷ್ಯರನ್ನು ಮೇಕೆಗಳಾಗಿ, ಅದೇ ಮೇಕೆಯನ್ನು ಮನುಷ್ಯರಾಗಿ ಬದಲಿಸುತ್ತಾರೆ. ಹೀಗೆ ಮಾಡಿ ಅವರ ಜತೆ ಸೆಕ್ಸ್ ನಡೆಸುತ್ತಾರೆ’ ಎಂದು ಯೂಟ್ಯೂಬರ್ ಅಭಿಷೇಕ್ ಕರ್ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ.ಇದಕ್ಕೆ ಅಸ್ಸಾಂ ಜನತೆ ಮಾತ್ರವಲ್ಲ ಸರ್ಕಾರ ಕೂಡ ಆಕ್ಷೇಪ ವ್ಯಕ್ತಪಡಿಸಿದೆ. ಕೂಡಲೇ ಕರ್ ಕ್ಷಮೆ ಕೇಳಿದ್ದಾರೆ. ಯಾರನ್ನೂ ನೋಯಿಸುವ ಉದ್ದೇಶ ತಮಗೆ ಇರಲಿಲ್ಲ ಎಂದಿದ್ದಾರೆ.
ಅಸ್ಸಾಂನ ಇತಿಹಾಸ ಮತ್ತು ಸಂಪ್ರದಾಯಗಳ ಬಗ್ಗೆ ಅವಹೇಳನ
‘ವ್ಯಾಪಾರಿ ಹೂಡಿಕೆದಾರ ಮತ್ತು ಮಾರ್ಗದರ್ಶಕ’ ಎಂದು ಗುರುತಿಸಿಕೊಳ್ಳುವ ಅಭಿಷೇಕ್ ಕರ್, ತನ್ನ ರಿಯಾ ಉಪ್ರೇತಿ ಹೆಸರಿನ ಯೂಟ್ಯೂಬ್ ಚಾನೆಲ್‌ನ ಪೋಡ್‌ಕಾಸ್ಟ್‌ನಲ್ಲಿ ಅಸ್ಸಾಂನ ಇತಿಹಾಸ ಮತ್ತು ಸಂಪ್ರದಾಯಗಳ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದರು. ಅಸ್ಸಾಂ ಮಯೋಂಗ್ ಹಳ್ಳಿಯಲ್ಲಿ ಮಹಿಳೆಯರು ತಮ್ಮ ಮಾಂತ್ರಿಕ ಶಕ್ತಿ ಬಳಸಿಕೊಂಡು ಮಾನವರನ್ನು ಮೇಕೆಗಳನ್ನಾಗಿ, ಅದೇ ಮೇಕೆಗಳನ್ನು ಮಾನವರನ್ನಾಗಿ ಪರಿವರ್ತಿಸುತ್ತಾರೆ. ಅವರ ಜತೆ ಲೈಂಗಿಕ ಕ್ರಿಯೆ ನಡೆಸುತ್ತಾರೆ ಎಂದಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಹುಣ್ಣಿಮೆ ದಿನ ಗರ್ಭ ಧರಿಸಬಾರದು: ಮಹಿಳಾ ಡಿಐಜಿ ಕರೆ
ಶಹದೋಲ್ (ಮ.ಪ್ರ.): ಮಧ್ಯಪ್ರದೇಶದ ಶಾಲೆಯೊಂದರಲ್ಲಿ ಪೊಲೀಸ್ ಉಪ ಮಹಾನಿರೀಕ್ಷಕಿಯೊಬ್ಬರು (ಡಿಐಜಿ) ವಿದ್ಯಾರ್ಥಿಗಳನ್ನುದ್ದೇಶಿಸಿ, ‘ತೇಜಸ್ವಿ ಮಕ್ಕಳನ್ನು ಪಡೆಯುವುದು ಹೇಗೆ?’ ಎಂಬ ಬಗ್ಗೆ ನೀಡಿದ ಉಪನ್ಯಾಸದ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದ್ದು, ಅದರಲ್ಲಿ ಅವರು, ‘ಹುಣ್ಣಿಮೆ ದಿನ ಗರ್ಭ ಧರಿಸಬಾರದು’ ಎಂದು ಯುವತಿಯರಿಗೆ ಕರೆ ನೀಡಿದ್ದಾರೆ.
ಇಲ್ಲಿನ ಡಿಐಜಿ ಸವಿತಾ ಸೋಹನೆ, ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ‘ಮೈ ಹೂ ಅಭಿಮನ್ಯ’ ಕಾರ್ಯಕ್ರಮದ ಭಾಗವಾಗಿ ಖಾಸಗಿ ಶಾಲೆಯೊಂದರ 10ರಿಂದ 12ನೇ ತರಗತಿಯ ಮಕ್ಕಳಿಗೆ ಈ ಕುರಿತು ಅ.4ರಂದು ಉಪನ್ಯಾಸ ನೀಡಿದ್ದರು.‘ಹೊಸ ಪೀಳಿಗೆಯನ್ನು ಭೂಮಿಗೆ ತರಲಿರುವ ನೀವು, ಅದಕ್ಕಾಗಿ ಯೋಜನೆ ರೂಪಿಸಬೇಕು. ಹುಣ್ಣೆಮೆಯಂದು ಗರ್ಭ ಧರಿಸಬಾರದು. ತೇಜಸ್ವಿ ಸಂತಾನಕ್ಕಾಗಿ ಸೂರ್ಯದೇವನಿಗೆ ನಮಿಸಿ ಜಲ ಅರ್ಪಿಸಿ ನಮಸ್ಕರಿಸಬೇಕು’ ಎಂದು ಅವರು ಹೇಳಿದ್ದಾರೆ. ವಿಪರ್ಯಾಸವೆಂದರೆ, ಇಂತಹ ಸಲಹೆಗಳನ್ನಿತ್ತ ಸವಿತಾ ಅವಿವಾಹಿತೆ.
ಈ ವೈರಲ್ ವಿಡಿಯೋ ಬಗ್ಗೆ ಸವಿತಾರ ಅಭಿಪ್ರಾಯ ಕೇಳಿದಾಗ, ‘ನಾನು ಹಿಂದೂ ಆಧ್ಯಾತ್ಮಿಕ ಗುರುಗಳ ಉಪದೇಶ ಕೇಳುತ್ತೇನೆ ಹಾಗೂ ಅದರ ಆಧಾರದಲ್ಲಿ ಉಪನ್ಯಾಸ ನೀಡುತ್ತೇನೆ. ಪೊಲೀಸ್ ಸೇವೆಗೆ ಸೇರುವ ಮೊದಲು ನಾನು ಶಿಕ್ಷಕಿಯಾಗಿದ್ದೆ. ಈಗಲೂ ಪ್ರತಿ ತಿಂಗಳು ಶಾಲೆಗಳಲ್ಲಿ ಉಪನ್ಯಾಸ ನೀಡುತ್ತೇನೆ.’ ಎಂದರು.
80 ಬಾಲಕಿಯರ ಶರ್ಟ್ ಬಿಚ್ಚಿಸಿದ ಪ್ರಾಚಾರ್ಯ: ವಿವಾದ
ಜಾರ್ಖಂಡ್‌ನ ಧನ್‌ಬಾದ್‌ನಲ್ಲಿರುವ ಪ್ರತಿಷ್ಠಿತ ಖಾಸಗಿ ಶಾಲೆಯ ಪ್ರಾಂಶುಪಾಲರು, ವಿದ್ಯಾರ್ಥಿನಿಯರು ಶರ್ಟ್ ಮೇಲೆ ಪೆನ್ನಿಂದ ಬರೆದುಕೊಂಡಿದ್ದರಿಂದ ಗರಂ ಆಗಿ, ಅವರ ಶರ್ಟ್ ಬಿಚ್ಚಿಸಿದ್ದಾರೆ ಹಾಗೂ ಬರೀ ಬ್ಲೇಸರ್ ಮೇಲೆ ಮನೆಗೆ ಕಳಿಸಿದ್ದಾರೆ. ಇದರ ವಿರುದ್ಧ ಪೋಷಕರು ಪ್ರತಿಭಟನೆ ನಡೆಸಿದ್ದು, ಸರ್ಕಾರ ತನಿಖೆಗೆ ಆದೇಶೀಸಿದೆ.80 ವಿದ್ಯಾರ್ಥಿನಿಯರು ‘ಪೆನ್ ಡೇ’ ಆಚರಿಸಿ ಅಂಗಿಗಳ ಮೇಲೆ ಪೆನ್‌ನಿಂದ ಬರೆದುಕೊಂಡಿದ್ದರು. ಇದನ್ನು ನೋಡಿದ ಪ್ರಾಚಾರ್ಯರು ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿದ್ದರು.