ಸಾರಾಂಶ
ಮುಕೇಶ್ ಅಂಬಾನಿ 9.55 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಭಾರತದ ನಂ.1 ಶ್ರೀಮಂತ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಹುರೂನ್ ಇಂಡಿಯಾ ಬಿಡುಗಡೆ ಮಾಡಿರುವ ಪಟ್ಟಿ ಅನ್ವಯ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.6ರಷ್ಟು ಇಳಿದಿದ್ದರೂ ಅಂಬಾನಿ, ಗೌತಮ್ ಅದಾನಿ ಹಿಂದಿಕ್ಕಿ ಮೊದಲನೇ ಸ್ಥಾನ ಪಡೆದಿದ್ದಾರೆ.
ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ 9.55 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಭಾರತದ ನಂ.1 ಶ್ರೀಮಂತ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಹುರೂನ್ ಇಂಡಿಯಾ ಬಿಡುಗಡೆ ಮಾಡಿರುವ ಪಟ್ಟಿ ಅನ್ವಯ ಕಳೆದ ವರ್ಷಕ್ಕೆ ಹೋಲಿಸಿದರೆ ಮುಕೇಶ್ ಅಂಬಾನಿ ಶೇ.6ರಷ್ಟು ಇಳಿದಿದ್ದರೂ ಅವರು ಗೌತಮ್ ಅದಾನಿ ಹಿಂದಿಕ್ಕಿ ಮೊದಲನೇ ಸ್ಥಾನ ಪಡೆದಿದ್ದಾರೆ.
ಗೌತಮ್ ಅದಾನಿ (8.14 ಲಕ್ಷ ಕೋಟಿ ರು.), ಎಚ್‌ಸಿಎಲ್‌ನ ರೋಶನಿ ನಾದರ್ ಮಲ್ಹೋತ್ರಾ (2.84 ಲಕ್ಷ ಕೋಟಿ ರು) ಆಸ್ತಿಯೊಂದಿಗೆ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಸೈರಸ್ ಪೂನಾವಾಲ (2.46 ಲಕ್ಷ ಕೋಟಿ ರು.), ಬಿರ್ಲಾ ಗ್ರೂಪ್‌ನ ಕುಮಾರ ಮಂಗಲಂ ಬಿರ್ಲಾ (2.32 ಲಕ್ಷ ಕೋಟಿ ರು.) ಆಸ್ತಿಯೊಂದಿಗೆ ಮೊದಲ 5 ಸ್ಥಾನ ಪಡೆದಿದ್ದಾರೆ.
ಕರ್ನಾಟಕದ 7 ಜನ:
ವಿಪ್ರೋದ ಅಜೀಂ ಪ್ರೇಮ್‌ಜಿ (₹2.21 ಲಕ್ಷ ಕೋಟಿ - 8ನೇ ಸ್ಥಾನ), ಜೆರೋದಾದ ನಿಖಿಲ್ ಕಾಮತ್ ಕುಟುಂಬ (₹40020 ಕೋಟಿ - 64ನೇ ಸ್ಥಾನ), ಮಣಿಪಾಲ್ ಹಾಸ್ಪಿಟಲ್‌ನ ರಂಜನ್ ಪೈ (₹34700 ಕೋಟಿ - 85ನೇ ಸ್ಥಾನ), ಇನ್ಫೋಸಿಸ್‌ನ ಎನ್.ಆರ್. ನಾರಾಯಣ ಮೂರ್ತಿ (₹32150 ಕೋಟಿ - 92ನೇ ಸ್ಥಾನ), ಉದ್ಯಮಿ ರಾಜಾ ಬಾಗ್ಮನೆ (₹31510 ಕೋಟಿ - 93ನೇ ಸ್ಥಾನ), ಉದ್ಯಮಿ ಜಿ.ಎಂ.ಆರ್ ರಾವ್ (₹31340 ಕೋಟಿ - 94ನೇ ಸ್ಥಾನ), ಇನ್ಫೋಸಿಸ್‌ನ ಎಸ್. ಗೋಪಾಲಕೃಷ್ಣನ್ (₹30740 ಕೋಟಿ - 96ನೇ ಸ್ಥಾನ)