ಅಮೆರಿಕ ಮತ್ತು ಇರಾನ್ ನಡುವಿನ ಕದನ ಸೋಮವಾರವೂ ಮುಂದುವರಿದಿದ್ದು, ಎರಡೂ ದೇಶಗಳು ಭಾರಿ ದಾಳಿ-ಪ್ರತಿದಾಳಿ ನಡೆಸಿವೆ. ಇರಾನ್‌ನ ಡಜನ್‌ಗಟ್ಟಲೆ ಗುರಿಗಳ ಮೇಲೆ ಅಮೆರಿಕ ಸೇನೆಯ ಕೇಂದ್ರ ಕಮಾಂಡ್ ಸೋಮವಾರ ಹೊಸ ದಾಳಿ ನಡೆಸಿದೆ. ಈ ವೇಳೆ ವಾಯುರಕ್ಷಣಾ ವ್ಯವಸ್ಥೆಗಳು, ರಾಡಾರ್ ನೆಲೆಗಳು, ಕ್ಷಿಪಣಿ, ಡ್ರೋನ್ ಸಂಗ್ರಹಾಗಾರ ಹಾನಿಗೊಳಗಾಗಿವೆ.
ದುಬೈ/ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ಕದನ ಸೋಮವಾರವೂ ಮುಂದುವರಿದಿದ್ದು, ಎರಡೂ ದೇಶಗಳು ಭಾರಿ ದಾಳಿ-ಪ್ರತಿದಾಳಿ ನಡೆಸಿವೆ.
ಅಮೆರಿಕ ಸೇನೆಯ ಕೇಂದ್ರ ಕಮಾಂಡ್ ಸೋಮವಾರ ಹೊಸ ದಾಳಿ
ಇರಾನ್‌ನ ಡಜನ್‌ಗಟ್ಟಲೆ ಗುರಿಗಳ ಮೇಲೆ ಅಮೆರಿಕ ಸೇನೆಯ ಕೇಂದ್ರ ಕಮಾಂಡ್ ಸೋಮವಾರ ಹೊಸ ದಾಳಿ ನಡೆಸಿದೆ. ಈ ವೇಳೆ ವಾಯುರಕ್ಷಣಾ ವ್ಯವಸ್ಥೆಗಳು, ರಾಡಾರ್ ನೆಲೆಗಳು, ಕ್ಷಿಪಣಿ, ಡ್ರೋನ್ ಸಂಗ್ರಹಾಗಾರ ಹಾನಿಗೊಳಗಾಗಿವೆ.
ಇರಾನ್ ಪ್ರತಿದಾಳಿ:
ಅಮೆರಿಕದ ಈ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್, ಬಹ್ರೈನ್, ಕುವೈತ್, ಜೋರ್ಡಾನ್ ಮತ್ತು ಇತರ ಪ್ರದೇಶಗಳಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ಮುಂದುವರಿಸಿದೆ. 2 ಕುವೈತ್ ವಾಯುನೆಲೆಗಳಲ್ಲಿ ಪೇಟ್ರಿಯಾಟ್ ವಾಯು ರಕ್ಷಣಾ ವ್ಯವಸ್ಥೆಗಳು, ಇಂಧನ ಟ್ಯಾಂಕ್‌ಗಳು ಮತ್ತು ಕಾರ್ಯತಂತ್ರದ ಎಫ್‌ಪಿಎಸ್ ರಾಡಾರ್ ವ್ಯವಸ್ಥೆಯನ್ನು ನಾಶಪಡಿಸಿದ್ದೇವೆ ಎಂದು ಇರಾನ್ ಹೇಳಿದೆ.ವಿವರ 7

