ಅಮೆರಿಕ ಬಾರ್-ರೆಸ್ಟೋರೆಂಟುಗಳಲ್ಲಿ ಇನ್ನು ವಾಂತಿ ಶುಲ್ಕ!
KannadaprabhaNewsNetwork | Published : Oct 15 2023, 12:45 AM IST
ಅಮೆರಿಕ ಬಾರ್-ರೆಸ್ಟೋರೆಂಟುಗಳಲ್ಲಿ ಇನ್ನು ವಾಂತಿ ಶುಲ್ಕ!
ಸಾರಾಂಶ
ಅಮೆರಿಕದಲ್ಲಿ ವಾಂತಿ ಮಾಡಿಕೊಳ್ಳುವ ಚಾಳಿಗೆ ತಡೆಗೆ ಕ್ರಮ ಕೈಗೊಳ್ಳಲಾಗಿದ್ದು, ‘ವಾಂತಿ ಶುಲ್ಕ’ ಹಾಕಲು ನಿರ್ಧರಿಸಲಾಗಿದೆ.
ಬಾರ್-ರೆಸ್ಟೋರೆಂಟುಗಳಲ್ಲಿ ಕಂಠಮಟ್ಟ ಕುಡಿದವರು ವಾಂತಿ ಮಾಡಿಕೊಳ್ಳುವುದು ಮಾಮೂಲಿ. ಇವರ ವಾಂತಿ ಬಳಿಯುವುದು ಬಾರ್‌ಗಳಲ್ಲಿನ ಸ್ವಚ್ಛತಾ ಕೆಲಸಗಾರರ ಕರ್ಮ! ಆದರೆ ಅಮೆರಿಕದಲ್ಲಿ ವಾಂತಿ ಮಾಡಿಕೊಳ್ಳುವ ಚಾಳಿಗೆ ತಡೆಗೆ ಕ್ರಮ ಕೈಗೊಳ್ಳಲಾಗಿದ್ದು, ‘ವಾಂತಿ ಶುಲ್ಕ’ ಹಾಕಲು ನಿರ್ಧರಿಸಲಾಗಿದೆ. ಓಕ್ಲಾಂಡ್‌ನ ರೆಸ್ಟೋರೆಂಟ್ ಒಂದರಲ್ಲಿ ವಾಂತಿ ಮಾಡಿಕೊಂಡರೆ 50 ಡಾಲರ್ ವಾಂತಿ ಸ್ವಚ್ಛತಾ ಶುಲ್ಕ ಹೇರಲಾಗುತ್ತಿದೆ. ಕುಡುಕರೇ ಎಚ್ಚರ..ಈ ಸುದ್ದಿ ಓದಿದ ಬಾರ್ ಮಾಲೀಕರು ಭಾರತದಲ್ಲೂ ಇದನ್ನು ಜಾರಿಗೊಳಿಸಬಹುದು!