ಸಾರಾಂಶ
ಮುಂಬೈ: ಖ್ಯಾತ ನಟ ಅಮಿತಾಭ್ ಬಚ್ಚನ್ ನಡೆಸುವ ಕೌನ್ ಬನೇಗಾ ಕರೋಡ್‌ಪತಿ ಯಲ್ಲೊ (ಕೆಬಿಸಿ) ಸ್ಪರ್ಧಿಯೊಬ್ಬರು ಕೇಳಿದ ಪ್ರಶ್ನೆಗೆ ಸ್ವತಃ ಬಚ್ಚನ್ ಹೌಹಾರಿದ್ದಾರೆ. ಏಕೆಂದರೆ ಅಲ್ಕಾ ಸಿಂಗ್ ಎಂಬಾಕೆ ಕಾರ್ಯಕ್ರಮದ ಮಧ್ಯದಲ್ಲಿ ಅಮಿತಾಭ್‌ರ ಗಡ್ಡವನ್ನು ಮುಟ್ಟುವ ಇಚ್ಛೆ ವ್ಯಕ್ತಪಡಿಸಿದ್ದಾರೆ!
ಹಾಟ್ ಸೀಟ್‌ನಲ್ಲಿ ಕುಳಿತಿದ್ದ ಅಲ್ಕಾ, ಪ್ರಶ್ನೋತ್ತರಗಳ ನಡುವೆ ಈ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಒಂದು ಕ್ಷಣ ಅವಾಕ್ಕಾದ ಬಚ್ಚನ್ ಆವರ ಆಸೆಗೆ ಕಾರಣ ಕೇಳಿದ್ದಾರೆ. ಆಗ ಆಕೆ ‘ನನ್ನ ಸಹೋದರ ಸದಾ ಕ್ಲೀನ್ ಶೇವ್ ಮಾಡಿಕೊಳ್ಳುತ್ತಾನೆ. ಹಾಗಾಗಿ ನನಗೆ ನಿಮ್ಮ ಬಿಳಿ ಗಡ್ಡ ಮುಟ್ಟುವ ಆಸೆಯಾಗಿದೆ’ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಚ್ಚನ್, ‘ನಿಮ್ಮ ಸಹೋದರ 87 ವರ್ಷದವನಾದಾಗ ಅವನಿಗೂ ಬಿಳಿ ಗಡ್ಡ ಬರುತ್ತದೆ’ ಎಂದು ತಮಾಷೆ ಮಾಡುತ್ತಾ, ಕಾರ್ಯಕ್ರಮದ ನಂತರ ಅನುಮತಿಸುವುದಾಗಿ ಹೇಳಿದ್ದಾರೆ.==
ಮ.ಪ್ರ.ದ ಕುನೋ ಅರಣ್ಯದಲ್ಲಿ ಮತ್ತೊಂದು ಚೀತಾ ಸಾವುಶಿಯೋಪುರ (ಮ.ಪ್ರ): ಮಧ್ಯಪ್ರದೇಶದ ಕುನೋ ಚೀತಾ ಅಭಯಾರಣ್ಯದಲ್ಲಿ ಮತ್ತೊಂದು ಚೀತಾ ಅಸುನೀಗಿದೆ.ಮಂಗಳವಾರ ಬೆಳಗ್ಗೆ 10:30ರ ವೇಳೆಗೆ ‘ಪವನ್’ ಎಂಬ ಚೀತಾ ಮೃತದೇಹ ಪತ್ತೆಯಾಗಿದೆ. ಅದು ಎಷ್ಟು ಹೊತ್ತಾದರೂ ಚಲಿಸದ ಕಾರಣ ಪರೀಕ್ಷಿಸಿದಾಗ ಅದರ ಅರ್ಧ ದೇಹ ನೀರಿನಲ್ಲಿ ಮುಳುಗಿರುವುದು ತಿಳಿದುಬಂದಿದೆ. ಅದರ ದೇಹದಲ್ಲಿ ಯಾವುದೇ ಗಾಯಗಳು ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ಅದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆ.5ರಂದೂ ಒಂದು ಚೀತಾ ಅಸುನೀಗಿತ್ತು. ಪ್ರಸ್ತುತ ಕುನೋದಲ್ಲಿ 12 ಮರಿಗಳು ಸೇರಿದಂತೆ 24 ಚೀತಾಗಳು ಉಳಿದಿವೆ.==
‘ಎಮರ್ಜೆನ್ಸಿ’ ಚಿತ್ರದ ಕಾರಣ ಜೀವ ಬೆದರಿಕೆ: ಕಂಗನಾ ದೂರುಮುಂಬೈ: ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರಣಾವತ್ ಅವರು ತಮ್ಮ ಮುಂಬರುವ ಚಿತ್ರ ‘ಎಮರ್ಜೆನ್ಸಿ’ ಬಿಡುಗಡೆಗೆ ಸಂಬಂಧಿಸಿದಂತೆ ಬೆದರಿಕೆ ಬಂದಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.ಚಿತ್ರದಲ್ಲಿ ಕಂಗನಾ ಅವರು ಸಿಖ್ ಅಂಗರಕ್ಷಕರಿಂದ ಹತ್ಯೆಗೀಡಾದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಿಹಾಂಗ್ ಸಿಖ್ಖರ ವೇಷ ಧರಿಸಿ 6 ಪುರುಷರು ಪರಸ್ಪರ ಮಾತನಾಡುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಅದರಲ್ಲಿ ಮಾತನಾಡುವ ಅವರು, ‘ಸಿನಿಮಾ ಬಿಡುಗಡೆಯಾದರೆ ಸಿಖ್ ಸಮುದಾಯ ಖಂಡಿಸುತ್ತದೆ. ನಿಮ್ಮ ಚಲನಚಿತ್ರವನ್ನು ಚಪ್ಪಲಿಗಳೊಂದಿಗೆ ಸ್ವೀಕರಿಸಲಾಗುತ್ತದೆ. ಇಂದಿರಾ ಗಾಂಧಿಗೆ ಆದ ಗತಿಯೇ ನಿಮಗೂ ಆದೀತು. ತಲೆ ಕತ್ತರಿಸಲೂ ನಾವು ಅಂಜುವುದಿಲ್ಲ’ ಎನ್ನುತ್ತಾರೆ.ಇದನ್ನು ಪೊಲೀಸರ ಗಮನಕ್ಕೆ ತಂದಿರುವ ಕಂಗನಾ, ರಕ್ಷಣೆಗೆ ಮನವಿ ಮಾಡಿದ್ದಾರೆ.==
ಕೆನಡಾದ ಹೊಸ ವಲಸೆ ನೀತಿ: 70 ಸಾವಿರ ವಿದ್ಯಾರ್ಥಿಗಳಿಗೆ ಗಡೀಪಾರು ಭೀತಿಟೊರೆಂಟೊ: ಕೆನಡಾ ಸರ್ಕಾರ ಇತ್ತೀಚಿಗೆ ಬದಲಾವಣೆ ಮಾಡಿರುವ ವಲಸೆ ನೀತಿಯಿಂದಾಗಿ, ಭಾರತೀಯರು ಸೇರಿದಂತೆ ಕೆನಡಾದಲ್ಲಿ ನೆಲೆಸಿರುವ 70 ಸಾವಿರ ವಿದೇಶಿ ವಿದ್ಯಾರ್ಥಿಗಳು ಗಡೀಪಾರಿನ ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿ ಸರ್ಕಾರದಿಂದ ನೀತಿ ಖಂಡಿಸಿ ಪ್ರತಿಭಟನೆ ಆರಂಭಿಸಿದ್ದಾರೆ.ಕೆನಡಾ ಶಾಶ್ವತ ನಿವಾಸಿ ಪ್ರಮಾಣ ಪತ್ರ ಹಂಚಿಕೆಯಲ್ಲಿ ಶೇ. 25ರಷ್ಟು ಕಡಿತಕ್ಕೆ ಮುಂದಾಗಿದೆ. ಜೊತೆಗೆ ಆಧ್ಯಯನದ ಪರವಾನಗಿ ಮಿತಿಗೊಳಿಸಲೂ ನಿರ್ಧರಿಸಿದೆ. ವಿದೇಶಿ ಉದ್ಯೋಗಿಗಳು, ವಿದ್ಯಾರ್ಥಿಗಳ ಪರವಾನಗಿ ಈ ವರ್ಷದ ಅಂತ್ಯಕ್ಕೆ ಕೊನೆಯಾಗುತ್ತದೆ. ವಿಸ್ತರಣೆ ಮಾಡದೇ ಇದ್ದಲ್ಲಿ 70 ಸಾವಿರ ವಿದ್ಯಾರ್ಥಿಗಳ ಗಡೀಪಾರಿನ ಸಾಧ್ಯತೆ ಇದೆ.ಹೊಸ ವಲಸೆ ನಿಯಮಗಳನ್ನು ಖಂಡಿಸಿ ಸಂಸತ್ ಹೊರಗಡೆ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಈ ಬದಲಾವಣೆಯಿಂದ 2024ರಲ್ಲಿ ಕೇವಲ 3.6 ಲಕ್ಷ ಮಂದಿಗೆ ಅಧ್ಯಯನ ಪರಾವನಗಿ ಸಿಗಲಿದೆ. ಇದು ಕಳೆದ ವರ್ಷಕ್ಕಿಂತ ಶೇ.35ರಷ್ಟು ಕಡಿಮೆ.
ಇನ್ನು ಕೆನಡಾ ಅಧ್ಯಕ್ಷ ಜಸ್ಟೀನ್ ಟ್ರುಡೋ ಸೋಮವಾರವಷ್ಟೇ ಕೆನಡಾದಲ್ಲಿ ಕಡಿಮೆ ವೇತನಕ್ಕೆ ತಾತ್ಕಾಲಿಕವಾಗಿ ಕೆಲಸ ಮಾಡುವ ವಿದೇಶಿ ಉದ್ಯೋಗಿಗಳ ಉದ್ಯೋಗವನ್ನು ಕಡಿತಗೊಳಿಸುವುದಾಗಿ ಹೇಳಿದ್ದರು.