ಸಾರಾಂಶ
ವಿದೇಶಕ್ಕೆ ನಿಷ್ಠತೆ ತೋರಿಸುವುದು ಅಕ್ರಮವಾಗಿದ್ದು, ಸಂವಿಧಾನದ 102ನೇ ವಿಧಿಯಡಿ ಅಕ್ರಮವಾಗುತ್ತದೆ ಹಾಗಾಗಿ ಒವೈಸಿಯ ಅನರ್ಹತೆಗೆ ಬಿಜೆಪಿ ನಾಯಕ ಅಮಿತ್ ಮಾಳವೀಯ ಆಗ್ರಹ ಮಾಡಿದ್ದಾರೆ.
ನವದೆಹಲಿ: ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಅವರು ‘ಜೈ ಪ್ಯಾಲೆಸ್ತೀನ್’ ಎಂದು ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಘೋಷಣೆ ಕೂಗಿರುವುದು ಅವರ ಅನರ್ಹತೆಗೆ ಕಾರಣ ಆಗಬಹುದೆ? ಹೀಗೊಂದು ಜಿಜ್ಞಾಸೆ ಈಗ ಹರಿದಾಡುತ್ತಿದೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮಂಗಳವಾರ ಸಂಜೆ ಹೇಳಿಕೆ ಬಿಡುಗಡೆ ಮಾಡಿ, ಸಂವಿಧಾನದ 102 ನೇ ವಿಧಿಯನ್ನು ಉಲ್ಲೇಖಿಸಿದ್ದಾರೆ. ‘ವಿದೇಶವೊಂದಕ್ಕೆ ನಿಷ್ಠೆಯನ್ನು ತೋರಿಸುವವರನ್ನು ಅನರ್ಹಗಗೊಳಿಸಬಹುದು’ ಎಂದು ಈ ನಿಯಮ ಹೇಳುತ್ತದೆ. ಇದನ್ನೇ ಉಲ್ಲೇಖಿಸಿ ಓವೈಸಿಯನ್ನು ಅನರ್ಹಗೊಳಿಸಬಹುದು ಎಂದು ಮಾಳವೀಯ ಆಗ್ರಹಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ‘ನಮಗೆ ಪ್ಯಾಲೆಸ್ತೀನ್ ಅಥವಾ ಇತರ ಯಾವುದೇ ದೇಶದೊಂದಿಗೆ ಯಾವುದೇ ದ್ವೇಷವಿಲ್ಲ, ಒಂದೇ ವಿಷಯವೆಂದರೆ, ಪ್ರಮಾಣ ವಚನ ಸ್ವೀಕರಿಸುವಾಗ, ಯಾವುದೇ ಸದಸ್ಯರು ಬೇರೆ ದೇಶವನ್ನು ಹೊಗಳಿ ಘೋಷಣೆ ಕೂಗುವುದು ಸರಿಯೇ ಎಂಬುದು. ಹೀಗಾಗಿ ನಾವು ನಿಯಮಗಳನ್ನು ಪರಿಶೀಲಿಸಬೇಕು. ಈ ಬಗ್ಗೆ ಸ್ಪೀಕರ್ ಜತೆ ಮಾತನಾಡುವೆ’ ಎಂದಿದ್ದಾರೆ.