ಬಿಎಸ್ಎಫ್ ಮುಖ್ಯಸ್ಥರ ಜೊತೆ ಶಾ ಮಾತುಕತೆ

| N/A | Published : May 09 2025, 07:58 AM IST

Amith Shah

ಸಾರಾಂಶ

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಆರಂಭ ಬೆನ್ನಲ್ಲೇ ಕೇಂದ ಗೃಹ ಸಚಿವ ಅಮಿತ್‌ ಶಾ ಅವರು ಗುರುವಾರ ರಾತ್ರಿ ಪಾಕ್ ಗಡಿಯಲ್ಲಿನ ಬಿಎಸ್‌ಎಫ್‌ ಸೇರಿದಂತೆ ದೇಶದ ಗಡಿ ಕಾವಲುಪಡೆಗಳ ಮುಖ್ಯಸ್ಥರ ಜೊತೆಗೆ ಮಾತುಕತೆ ನಡೆಸಿದರು.

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಆರಂಭ ಬೆನ್ನಲ್ಲೇ ಕೇಂದ ಗೃಹ ಸಚಿವ ಅಮಿತ್‌ ಶಾ ಅವರು ಗುರುವಾರ ರಾತ್ರಿ ಪಾಕ್ ಗಡಿಯಲ್ಲಿನ ಬಿಎಸ್‌ಎಫ್‌ ಸೇರಿದಂತೆ ದೇಶದ ಗಡಿ ಕಾವಲುಪಡೆಗಳ ಮುಖ್ಯಸ್ಥರ ಜೊತೆಗೆ ಮಾತುಕತೆ ನಡೆಸಿದರು.

ಆಪರೇಷನ್ ಸಿಂದೂರ ಕಾರ್ಯಾಚರಣೆ ಮತ್ತು ಪಾಕ್ ಭಾರತೀಯ ಮಿಲಿಟರಿ ನೆಲೆಗಳ ಮೇಲೆ ದಾಳಿ ಯತ್ನ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಿರುವುದರಿಂದ ಅಂತಾರಾಷ್ಟ್ರೀಯ ಗಡಿಗಳಲ್ಲಿ ಪರಿಸ್ಥಿತಿಯನ್ನು ಶಾ ಅವಲೋಕಿಸಿದರು. 

ಈ ವೇಳೆ ಗಡಿ ಕಾವಲು ಪಡೆಗಳ ಮಹಾನಿರ್ದೇಶಕರು ಗೃಹ ಸಚಿವರಿಗೆ ಪ್ರಸ್ತುತ ಪರಿಸ್ಥಿತಿ ಮತ್ತು ಭದ್ರತೆಯನ್ನು ಹೆಚ್ಚಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಇನ್ನು ಸಿಐಎಸ್‌ಎಫ್‌ ಮುಖ್ಯಸ್ಥರೊಂದಿಗೆ ಶಾ ಮಾತನಾಡಿ ದೇಶದ ವಿಮಾನ ನಿಲ್ದಾಣಗಳಲ್ಲಿನ ಭದ್ರತೆಯ ಬಗ್ಗೆ ಮಾಹಿತಿ ಪಡೆದರು.