ಫ್ಲೈದುಬೈ ವಿಮಾನವನ್ನು ಪತನಗೊಳಿಸಲು ಮುಂದಾಗಿದ್ದ ಒಮಾನಿ ಪೈಲಟ್‌ನ ಕೃತ್ಯವನ್ನು ಎಲ್ಲರ ಗಮನಕ್ಕೆ ತಂದದ್ದಷ್ಟೇ ಅಲ್ಲದೆ, ತೀವ್ರ ಇರಿತಕ್ಕೊಳಗಾಗಿದ್ದ ಭಾರತೀಯ ಪೈಲಟ್ ಸ್ಮಿತ್ ಮಚ್ಛರ್‌ರ ಜೀವ ಉಳಿಸಲು ಕಾರಣವಾಗಿದ್ದು ಇಸ್ರೇಲ್‌ನ ಪುಟ್ಟ ಬಾಲಕಿ ಎಂಬ ಅಚ್ಚರಿಯ ವಿಷಯ ತಿಳಿದುಬಂದಿದೆ.
-ಶೌಚಕ್ಕೆ ಹೋದಾಗ ಕಾಕ್‌ಪಿಟ್‌ನಲ್ಲಿ ಗಲಾಟೆ
-ದೃಶ್ಯ ಕಂಡು ತಾಯಿಗೆ ಸುದ್ದಿ ತಿಳಿಸಿದ್ದ ಬಾಲೆವಾಷಿಂಗ್ಟನ್: ಫ್ಲೈದುಬೈ ವಿಮಾನವನ್ನು ಪತನಗೊಳಿಸಲು ಮುಂದಾಗಿದ್ದ ಒಮಾನಿ ಪೈಲಟ್‌ನ ಕೃತ್ಯವನ್ನು ಎಲ್ಲರ ಗಮನಕ್ಕೆ ತಂದದ್ದಷ್ಟೇ ಅಲ್ಲದೆ, ತೀವ್ರ ಇರಿತಕ್ಕೊಳಗಾಗಿದ್ದ ಭಾರತೀಯ ಪೈಲಟ್ ಸ್ಮಿತ್ ಮಚ್ಛರ್‌ರ ಜೀವ ಉಳಿಸಲು ಕಾರಣವಾಗಿದ್ದು ಇಸ್ರೇಲ್‌ನ ಪುಟ್ಟ ಬಾಲಕಿ ಎಂಬ ಅಚ್ಚರಿಯ ವಿಷಯ ತಿಳಿದುಬಂದಿದೆ.
ನಿನಾ ಎಂಬ 8ರ ಬಾಲಕಿ ತನ್ನ ತಾಯಿಯ ಜತೆ ಇಸ್ರೇಲ್‌ಗೆ ತೆರಳುತ್ತಿದ್ದಳು. ಈ ಮಧ್ಯೆ ಶೌಚಾಲಯಕ್ಕೆಂದು ಹೋಗಿದ್ದಾಗ ಕಾಕ್‌ಪಿಟ್‌ನೊಳಗಿಂದ ಕೂಗಾಟದ ಸದ್ದು ಕೇಳಿಸಿದೆ. ಸಹ ಪೈಲಟ್‌ನಿಂದ ಇರಿತಕ್ಕೊಳಗಾಗಿ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಸ್ಮಿತ್ ಮಚ್ಛರ್ ಕಾಕ್‌ಪಿಟ್ ಬಾಗಿಲು ತೆಗೆದಿದ್ದರಿಂದ ಒಳಗೆ ನಡೆಯುತ್ತಿದ್ದ ದೃಶ್ಯ ಬಾಲಕಿ ಕಣ್ಣಿಗೆ ಬಿದ್ದಿದೆ. ತಕ್ಷಣ ಆಕೆ ತಾಯಿಯತ್ತ ಓಡಿಬಂದು ಘಟನೆಯ ಬಗ್ಗೆ ತಿಳಿಸಿದ್ದಾಳೆ.ಪುತ್ರಿಯ ಆತಂಕ ನೋಡಿ ತಾಯಿ ಕಾಕ್‌ಪಿಟ್ ಕಡೆ ಹೋದಾಗ ರಕ್ತಸಿಕ್ತ ದೃಶ್ಯ ನೋಡಿ ಗಾಬರಿಯಿಂದ ಚೀರಿದ್ದಾಳೆ. ಈ ಚೀರಾಟ ಕೇಳಿ ಪ್ರಯಾಣಿಕರಾದ ಯಾನಿವ್ ಹಯೂನ್, ಝ್ವಿಕಾ ನೇಮ್ಸ್ ಮತ್ತು ಅಸಾಫ್ ರಾಜನ್ ಕಾಕ್‌ಪಿಟ್ ಕಡೆ ಓಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಬಳಿಕ ದಂತ ವೈದ್ಯ ಶೋತಾ ಮುಸಾಯೇವ್ ಸ್ಮಿತ್‌ರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಇದೇ ವಿಮಾನದಲ್ಲಿ ಪ್ರಯಾಣಿಕನಾಗಿದ್ದ ಪೈಲಟ್ ಒಬ್ಬರು ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಎಲ್ಲರ ಜೀವ ಉಳಿಸಿದ್ದಾರೆ.