ಆಂಧ್ರಪ್ರದೇಶದಲ್ಲಿ 8 ವರ್ಷದ ಬಾಲಕಿ ಮೇಲೆ ಅಪ್ರಾಪ್ತ ಬಾಲಕರು ನಡೆಸಿದ್ದ ಗ್ಯಾಂಗ್‌ರೇಪ್‌ : ಪೋರ್ನ್ ನೋಡಿ ಕೃತ್ಯ

| Published : Jul 18 2024, 01:30 AM IST / Updated: Jul 18 2024, 05:20 AM IST

ಆಂಧ್ರಪ್ರದೇಶದಲ್ಲಿ 8 ವರ್ಷದ ಬಾಲಕಿ ಮೇಲೆ ಅಪ್ರಾಪ್ತ ಬಾಲಕರು ನಡೆಸಿದ್ದ ಗ್ಯಾಂಗ್‌ರೇಪ್‌ : ಪೋರ್ನ್ ನೋಡಿ ಕೃತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಜು.7ರಂದು ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ 8 ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತ ಬಾಲಕರು ನಡೆಸಿದ್ದ ಗ್ಯಾಂಗ್‌ರೇಪ್‌ಗೆ, ಅವರು ಪೋರ್ನ್‌ ವಿಡಿಯೋ ನೋಡಿ ಅದೇ ಘಟನೆಯನ್ನು ಮರುಸೃಷ್ಟಿ ಮಾಡಲು ಯತ್ನಿಸಿದ್ದೇ ಕಾರಣ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ನಂದ್ಯಾಲ: ಜು.7ರಂದು ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ 8 ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತ ಬಾಲಕರು ನಡೆಸಿದ್ದ ಗ್ಯಾಂಗ್‌ರೇಪ್‌ಗೆ, ಅವರು ಪೋರ್ನ್‌ ವಿಡಿಯೋ ನೋಡಿ ಅದೇ ಘಟನೆಯನ್ನು ಮರುಸೃಷ್ಟಿ ಮಾಡಲು ಯತ್ನಿಸಿದ್ದೇ ಕಾರಣ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಬಂಧಿತರು ವಿಚಾರಣೆ ವೇಳೆ, ‘ಬ್ಲೂಫಿಲಂ ನೋಡಿ ಅದರ ಮರುಸೃಷ್ಟಿಗೆ ತಾವು ಹೀಗೆ ಮಾಡಿದ್ದೆವು’ ಎಂದು ತಪ್ಪೊಪ್ಪಿಕೊಂಡಿದ್ದಾರೆ

ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ನೋಡಿದ್ದ 6 ಮತ್ತು 7ನೇ ತರಗತಿಯ ಮೂವರು ಬಾಲಕರು, ತಮ್ಮ ಮನೆಯ ಸಮೀಪದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ವಿಡಿಯೋದಲ್ಲಿದ್ದಂತೆ ಗ್ಯಾಂಗ್‌ರೇಪ್‌ ಮಾಡಿದ್ದರು. ಬಳಿಕ ಆಕೆ ಈ ವಿಷಯ ಬಹಿರಂಗಪಡಿಸಬಹುದೆಂದು ಹೆದರಿ ಆಕೆಯ ಕತ್ತುಹಿಸುಕಿ ಹತ್ಯೆಗೈದು ಸಮೀಪದ ಕಾಲುವೆಗೆ ಎಸೆದಿದ್ದರು.

ಬಳಿಕ ಒಬ್ಬ ಬಾಲಕ ಈ ವಿಷಯವನ್ನು ಪೋಷಕರಿಗೆ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಬಾಲಕನ ತಂದೆ ಮತ್ತು ಬಂಧುವೊಬ್ಬರು ಕಾಲುವೆಯಿಂದ ಶವ ತೆಗೆದು ಅದಕ್ಕೆ ಕಲ್ಲು ಕಟ್ಟಿ ಸಮೀಪದ ಕೃಷ್ಣಾ ನದಿಯಲ್ಲಿ ಎಸೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಈಗಾಗಲೇ ಮೂವರು ಬಾಲಕರು, ಇಬ್ಬರು ಹಿರಿಯರನ್ನು ಬಂಧಿಸಲಾಗಿದೆ. ಆದರೆ ಬಾಲಕಿಯ ಶವ ಇನ್ನೂ ಸಿಕ್ಕಿಲ್ಲ.