ಪಾದದ ಮೂಲಕ ಅಂಗವಿಕಲನ ಮತ!

| Published : May 08 2024, 01:00 AM IST

ಸಾರಾಂಶ

ಪಾದದ ಮೂಲಕ ಗುಜರಾತ್‌ನ ನಾಡಿಯಾಡ್‌ನಲ್ಲಿ ಸೆಕ್ರೆಟ್ರಿಯೆಟ್‌ ಪದವೀಧರ ಅಂಕಿತ್‌ ಸೋನಿ ಮತ ಚಲಾಯಿಸಿದ್ದಾನೆ.

ನಾಡಿಯಾಡ್ (ಗುಜರಾತ್): ನಾಡಿಯಾಡ್‌ನ ಮತಗಟ್ಟೆಯಲ್ಲಿ ಅಂಕಿತ್ ಸೋನಿ ಎಂಬ ಮತದಾರರೊಬ್ಬರು ತಮ್ಮ ಪಾದದ ಮೂಲಕ ಮತ ಮಂಗಳವಾರ ಚಲಾಯಿಸಿದರು.

ಈ ಬಗ್ಗೆ ಮಾತನಾಡಿದ ಅವರು, ‘20 ವರ್ಷಗಳ ಹಿಂದೆ ವಿದ್ಯುತ್ ಆಘಾತದಿಂದ ನನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದೇನೆ, ನನ್ನ ಶಿಕ್ಷಕರು ಮತ್ತು ಗುರುಗಳ ಆಶೀರ್ವಾದದಿಂದ ನಾನು ಮಾಡಿದ್ದೇನೆ.

ನಾನು ಕಂಪನಿ ಸೆಕ್ರೆಟ್ರಿಯೇಟ್ ಪದವೀಧರ.

ಎಲ್ಲರೂ ಮನೆಯಿಂದ ಹೊರಗೆ ಬಂದು ಮತ ಚಲಾಯಿಸುವಂತೆ ನಾನು ಜನರಿಗೆ ಮನವಿ ಮಾಡುತ್ತೇನೆ’ ಎಂದರು.