- ರಿಷಬ್‌, ರಜನಿ, ಕಮಲ್‌ ಸೇರಿ ಹಲವರ ಖಂಡನೆ

- ಥೇಟರಲ್ಲಿ ಸಿನಿಮಾ ನೋಡಿ: ಪೂಜಾ ಹೆಗ್ಡೆ ಮನವಿಚೆನ್ನೈ: ಬಿಡುಗಡೆಗೂ ಮುನ್ನವೇ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಅವರ ಸಿನಿಮಾ ‘ಜನ ನಾಯಗನ್‌’ ಆನ್‌ಲೈನ್‌ನಲ್ಲಿ ಸೋರಿಕೆ ಆಗಿರುವುದಕ್ಕೆ ನಟ ರಿಷಬ್‌ ಶೆಟ್ಟಿ, ರಜನಿಕಾಂತ್‌, ಕಮಲ್‌ ಹಾಸನ್‌, ನಟಿ ಪೂಜಾ ಹೆಗ್ಡೆ ಸೇರಿ ಹಲವರು ಕಿಡಿಕಾರಿದ್ದಾರೆ. ಇದೇ ವೇಳೆ, ಸೋರಿಕೆ ಹಿಂದೆ ಬಿಜೆಪಿ ಕೈವಾಡ ಇಲ್ಲ ಎಂದು ಪಕ್ಷದ ನಾಯಕ ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ.

ಇದರ ಹಿಂದೆ ಕೇಂದ್ರ ಸಚಿವ ಎಲ್‌. ಮುರುಗನ್‌ ಹಾಗೂ ಬಿಜೆಪಿ ಕೈವಾಡ ಇದೆ ಎನ್ನುವ ಆರೋಪ ಕೇಳಿಬಂದಿತ್ತು. ಇದಕ್ಕೆ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಅಣ್ಣಾಮಲೈ ಪ್ರತಿಕ್ರಿಯಿಸಿ, ‘ಇದರಲ್ಲಿ ಬಿಜೆಪಿಯನ್ನು ಏಕೆ ಎಳೆದು ತರಬೇಕು? ತಪ್ಪು ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕು. ರಾಜಕೀಯಕ್ಕಾಗಿ ಬಿಜೆಪಿ ಎಳೆದು ತರಬೇಡಿ’ ಎಂದಿದ್ದಾರೆ.

ಚಿತ್ರರಂಗ ಖಂಡನೆ:

ನಟ ರಜನೀಕಾಂತ್‌, ಕಮಲ್‌ ಹಾಸನ್‌, ಸೂರ್ಯ, ಚಿರಂಜೀವಿ ಈ ಬಗ್ಗೆ ಧ್ವನಿ ಎತ್ತಿದ್ದು, ‘ಇಡೀ ಚಿತ್ರರಂಗ ಇದರ ವಿರುದ್ಧ ಮಾತನಾಡಬೇಕು. ಪೈರಸಿ ವಿರುದ್ಧ ನಿಯಮ ಮತ್ತಷ್ಟು ಬಿಗಿ ಆಗಬೇಕು’ ಎಂದಿದ್ದಾರೆ.


ಎಕ್ಸ್‌ನಲ್ಲಿ ಈ ಬಗ್ಗೆ ಬರೆದಿರುವ ರಿಷಬ್‌ ಶೆಟ್ಟಿ, ‘ಜನನಾಯಗನ್‌ ಸಿನಿಮಾದ ಸೋರಿಕೆ ದುರದೃಷ್ಟಕರ. ಪ್ರೇಕ್ಷಕರಾಗಿ ಸಿನಿಮಾದ ಪ್ರಯತ್ನಗಳನ್ನು ಗೌರವಿಸಿ, ಸೋರಿಕೆ ದೃಶ್ಯಗಳನ್ನು ಹರಡುವುದನ್ನ ನಿಲ್ಲಿಸಿ. ಇಡೀ ಚಿತ್ರ ತಂಡದೊಂದಿಗೆ ಇರುತ್ತೇವೆ’ ಎಂದಿದ್ದಾರೆ.

ಥೇಟರಲ್ಲಿ ನೋಟಿ- ಪೂಜಾ:

ನಿಮಾದಲ್ಲಿ ನಟಿಸಿರುವ ಪೂಜಾ ಬೇಸರ ವ್ಯಕ್ತಪಡಿಸಿದ್ದು, ‘ಸಿನಿಮಾದ ದೃಶ್ಯಗಳನ್ನು ಈ ರೀತಿ ಹಂಚಿಕೊಳ್ಳುವುದರಿಂದ ಚಿತ್ರದಲ್ಲಿ ಅಭಿನಯಿಸಿದ, ಕೆಲಸ ಮಾಡಿದವರ ಗೌರವ ಕಸಿದುಕೊಳ್ಳುತ್ತದೆ. ಈ ರೀತಿ ಕಳ್ಳತನ ಪ್ರೋತ್ಸಾಹಿಸಿಬೇಡಿ. ಚಿತ್ರಮಂದಿರದಲ್ಲೇ ಸಿನಿಮಾ ನೋಡೋಣ’ ಎಂದಿದ್ದಾರೆ.