ಡಾ. ಮನಮೋಹನ ಸಿಂಗ್‌ ಪಾತ್ರದಲ್ಲಿ ನಟಿಸುತ್ತ ಅವರ ಗುಣ ಅಳವಡಿಸಿಕೊಂಡೆ : ನಟ ಅನುಪಮ್‌ ಖೇರ್‌

| Published : Dec 28 2024, 01:01 AM IST / Updated: Dec 28 2024, 04:22 AM IST

ಸಾರಾಂಶ

‘ದ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಚಿತ್ರದಲ್ಲಿ ಡಾ. ಮನಮೋಹನ ಸಿಂಗ್‌ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಅನುಪಮ್‌ ಖೇರ್‌ ಅವರು ಸೀಂಗ್‌ರ ಸಾವಿಗೆ ಸಂತಾಪ ಸೂಚಿಸಿದ್ದು, ಅವರ ಬಗೆಗಿನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ನವದೆಹಲಿ: ‘ದ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಚಿತ್ರದಲ್ಲಿ ಡಾ. ಮನಮೋಹನ ಸಿಂಗ್‌ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಅನುಪಮ್‌ ಖೇರ್‌ ಅವರು ಸೀಂಗ್‌ರ ಸಾವಿಗೆ ಸಂತಾಪ ಸೂಚಿಸಿದ್ದು, ಅವರ ಬಗೆಗಿನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಖೇರ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಸುದೀರ್ಘ ವಿಡಿಯೋದಲ್ಲಿ, ‘ರಾಜಕೀಯ ಸೇರಿದಂತೆ ಹಲವು ಕಾರಣಗಳಿಂದಾಗಿ ಮೊದಲು ಈ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದೆ. ಆದರೆ ನಂತರ ಈ ಪಾತ್ರದಲ್ಲಿ ಮನಃಪೂರ್ವಕವಾಗಿ ಅಭಿನಯಿಸಿದೆ. ಈ ವೇಳೆ ಅವರ ಕೆಲ ಗುಣಗಳನ್ನೂ ಅಳವಡಿಸಿಕೊಂಡೆ. ಆ ಚಿತ್ರ ವಿವಾದಾತ್ಮಕವಾಗಿರಬಹುದು, ಆದರೆ ನೀಲಿ ಪೇಟದಲ್ಲಿ ಕಂಗೊಳಿಸಿದ ಆ ವ್ಯಕ್ತಿಯಲ್ಲ’ ಎಂದಿದ್ದಾರೆ.